ಕಲಬುರಗಿ:ಜೂ.7: ಕರ್ನಾಟಕ ರಾಜ್ಯ ಸರಕಾರಿ ಅಲ್ಪಸಂಖ್ಯಾತರ ನೌಕರರ ಸಂಘ (ಕಲ್ಯಾಣ ಕರ್ನಾಟಕ) ಕಲ್ಬುರ್ಗಿ ಇದರ ವತಿಯಿಂದ ಇತ್ತೀಚೆಗೆ ನಿವೃತ್ತಿ ಹೊಂದಿದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾಗಿದ್ದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರನ್ನು ಜೂನ್ ಐದರಂದು ಕಲಬುರ್ಗಿಯ ಹೋಟೆಲ್ ಆಮಂತ್ರಣ ಸಭಾಂಗಣದಲ್ಲಿ ಸನ್ಮಾನಿಸಲಾಯಿತು ಅಲ್ಪಸಂಖ್ಯಾತರ ನೌಕರ ಸಂಘದ ಗೌರವಾಧ್ಯಕ್ಷರಾದ ಸೈಯದ್ ನಜಿರರೋದ್ದಿನ್ ಮುತ್ತವಲ್ಲಿ ಅವರು ಶಾಲು ಹಾರ ಮತ್ತು ಅಭಿನಂದನಾ ಪತ್ರವನ್ನು ಸಮರ್ಪಿಸಿ ಮಾತನಾಡುತ್ತಾ ಆಕಾಶವಾಣಿಯಲ್ಲಿ ವಿವಿಧ ವೃಂದದಲ್ಲಿ ಸೇವೆ ಸಲ್ಲಿಸಿ ಆಕಾಶವಾಣಿಯ ಕೇಳುಗರ ಸಂಖ್ಯೆಯನ್ನು ಹೆಚ್ಚಿಸುವಂತೆ ಮಾಡಿ ಜನಮನದಲ್ಲಿ ಬಾನುಲಿಯನ್ನು ಕೇಳುವಂತೆ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರ್ಗಿ ಆಕಾಶವಾಣಿ ಕೀರ್ತಿ ಪಡೆಯಲು ಕಾರಣ ತಮಗೆ ಹಾರ್ದಿಕ ಅಭಿನಂದನೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಮತ್ತಿತರರು ಇದ್ದರು ಉದ್ಯಮಿಗಳಾದ ವೆಂಕಟೇಶ್ ಪ್ರವೀಣ್ ಜತ್ತನ್ ಕೂಡ ಹಾಜರಿದ್ದರು