ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ

ಬತ್ತದ ನಾಡಿನಲ್ಲಿ ಕಳಚಿತು ಸರ್ವಧರ್ಮದ ಕೊಂಡಿ
ಮೇಟಿಗೌಡ -ಸಂಜೆವಾಣಿ
ರಾಯಚೂರು,ಮಾ.೧೮- ಸರ್ವರೂ ಒಂದೇ ಎನ್ನುವ ಭಾವದ ಧರ್ಮವನ್ನು ಬಿತ್ತಿದ ಹರಿಕಾರ, ಸರ್ವರಿಗೂ ಸಮಸ್ಥಾನ ನೀಡಿದ ಭಾವ ಜೀವಿ, ಜಾತಿ ಬೇಧವ ತೋರದ ಕಾವಿ ತೊಟ್ಟ ಪುಣ್ಯಾತ್ಮ, ಶಿವಮೂರ್ತಿ ಸ್ವಾಮಿಗಳ ಅಗಲಿಕೆಯಿಂದ ಬತ್ತದ ನಾಡಿನಲ್ಲಿ ಕಳಚಿತು ಸರ್ವ ಧರ್ಮದ ಕೊಂಡಿ.
ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಇತಿಹಾಸ ಪ್ರಸಿದ್ಧ ಮಠವಾಗಿರುವ ಕಲ್ಮಠ ಹಲವಾರು ರೀತಿಯಲ್ಲಿ ವಿಶೇಷತೆಯಿಂದ ಕೂಡಿದೆ ಇದಕ್ಕೆಲ್ಲಾ ಪ್ರಮುಖರಾದವರು ಕಲ್ಮಠದ ಹಿರಿಯ ಸ್ವಾಮೀಜಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇವರು ಲಿಂಗೈಕ್ಯರಾಗಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ.
ತ್ರಿವಿಧ ದಾಸೋಹದ ಮೂರ್ತಿಯಾಗಿದ್ದರು, ಧರ್ಮ, ಶಿಕ್ಷಣ, ವಸತಿ ನಿಲಯ,ಹೀಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮುಖಾಂತರ ಯಾವುದೇ ಧರ್ಮ ಭೇದವಿಲ್ಲದೇ ಎಲ್ಲರನ್ನು ಸಮನಾಗಿ ಕಾಣುವ ದೈವ ಪುರುಷರಾಗಿದ್ದರು.
ಧರ್ಮ ತತ್ವ ಆದರ್ಶಗಳನ್ನು ಖಾವಿ ತೊಟ್ಟು ಪಾಲಿಸಿ ಎಲ್ಲಾರಿಗೂ ಆದರ್ಶವಾದ ಮಹಾತ್ಮರಾಗಿದ್ದರು,
ನಿನ್ನೆ ಮದ್ಯಾಹ್ನ ನಮ್ಮನೆಲ್ಲ ಬಿಟ್ಟು ಅಗಲಿದ್ದಾರೆ. ಸಕಾರ ಮೂರ್ತಿಯಾದ ಸ್ವಾಮೀಜಿಗಳು ನಿಷ್ಕಲ್ಮಶ ಮನಸ್ಸುಳ್ಳವರಾಗಿದ್ದರು. ತಮ್ಮ ಪರಿಶ್ರಮದ ಮುಖಾಂತರ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮುಖಾಂತರ ಮಾನ್ವಿ ತಾಲೂಕನ್ನು ವಿದ್ಯಾ ಕಾಶಿಯನ್ನಾಗಿ ಮಾಡಿದವರು, ಬೇರೆ ಬೇರೆ ರಾಜ್ಯದಿಂದ ಬಂದು ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಪ್ರಸಾದ ನೀಡಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಕೊಟ್ಟವರು ಸರ್ವ ಧರ್ಮಗಳ ಧ್ಯಾನ ಮಂದಿರವನ್ನು ನಿರ್ಮಿಸಿ ಮಾನ್ವಿ ತಾಲೂಕನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಿದವರು ನಮ್ಮ ಕಲ್ಮಠದ ಡಾ.ಶಿವಮೂರ್ತಿ ಸ್ವಾಮೀಜಿಗಳು.ಕಾವಿತೊಟ್ಟು ಸರಳ ಜೀವನವನ್ನು ನಡೆಸಿದರು.
ಅರಿಷಡ್ವರ್ಗಗಳನ್ನು ತೊರೆದು ನಿಂತರು, ಹಲವಾರು ಭಕ್ತರ ಪಾಲಿಗೆ ದೇವರಾದವರು ನಮ್ಮ ಸ್ವಾಮೀಜಿ..
ಶಾಂತಿದೂತ ಮುಖದಲ್ಲಿ ಕಳೆ ತೋರಿದಾತ, ಹಲವರ ಬಾಳಲ್ಲಿ ಬೆಳಕಾದಾತ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜೀ. ಮಾನ್ವಿ ಪಟ್ಟಣದ ಧ್ಯಾನ ಮಂದಿರದಲ್ಲಿ ೧ ಲಕ್ಷ ಶಿವಲಿಂಗಗಳ ಪ್ರತಿಷ್ಠಾಪನೆಯ ಮುಖಾಂತರ ಆಧ್ಯಾತ್ಮಿಕ ಕ್ಷೇತ್ರದ ಕಡೆಗೆ ಗಮನ ಹರಿಸಿ ಆಧ್ಯಾತ್ಮದ ಗುರುವಾದರು ಶೈಕ್ಷಣಿಕವಾಗಿ ಹಲವಾರು ಸಂಸ್ಥೆಗಳನ್ನು ಕಟ್ಟಿ ಬೆಳಿಸುವುದರ ಮುಖಾಂತರ ವಿದ್ಯಾರ್ಥಿಗಳ ಪಾಲಿಗೆ ದೈವವಾದರೂ,

ಬಾಕ್ಸ್
ಮಹಾನ್ ಚೇತನ,ಸರ್ವಧರ್ಮದ ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾಗಿರುವದು ನಾಡಿಗೆ ತುಂಬಲಾರದ ನಷ್ಟವಾಗಿದೆ.
ಕಲ್ಮಠ ಮಠವನ್ನಷ್ಟೇ ಬೆಳೆಸಿದಷ್ಟೇ ಅಲ್ಲದೇ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಬೆಳಸಿ ಹಲವರಿಗೆ ವಿದ್ಯಾದಾನದ ಜೊತೆಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿದವರು,
ಹಲವರಿಗೆ ಗುರುವಾಗಿ ಧರ್ಮದ ಮೂಲಕ ವಿದ್ಯೆಯನ್ನು ಕಲಿಸಿದರು,
ಶಿಷ್ಟಾಚಾರವನ್ನು ಕಲಿಸುವುದರ ಮುಖಾಂತರ ಆದರ್ಶಪ್ರಯವಾಗಿ ಉಳಿದರು, ಅವರನ್ನು ಕಳೆದುಕೊಂಡ ಎಡೆದೊರೆ ನಾಡಿದ್ದು ಬರುಡಾಗಿದೆ.