
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.03: ತಾಲೂಕು ಹಂದಿಹಾಳ್ ಗ್ರಾಮದಲ್ಲಿಂದು ಶ್ರೀಗಾನಯೋಗಿ ಡಾ|| ಶ್ರೀ ಪಂ.ಪಂಚಾಕ್ಷರಿ ಗವಾಯಿಗಳ ಪರಮ ಶಿಷ್ಯರಾದ ಲಿಂಗೈಕ್ಯ ಡಾ|| ಶ್ರೀ ಪಂ.ಪುಟ್ಟರಾಜ ಕವಿ ಗವಾಯಿಗಳ 110 ಜನ್ಮದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಗುರು ಪುಟ್ಟರಾಜ ಸೇವಾ ಸಮಿತಿಯವರಿಂದ ಡಾ|| ಶ್ರೀ ಪಂ.ಪುಟ್ಟರಾಜ ಕವಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಂಧರಾಗಿ ತ್ರಿಭಾಷಾ ಕವಿಯಾಗಿ ನೂರಾರು ಗ್ರಂಥಗಳನ್ನು ರಚಿಸಿದ್ದಾರೆ. ಸಾವಿರಾರು ಅಂಧರ ಬಾಳಿನ ಆಶಾಕಿರಣ ಪುಟ್ಟರಾಜ ಸೇವೆ ಅವಿಸ್ಮರಣೀಯವಾದದು ಇಂದು ಅವರ ಶಿಷ್ಯರು ದೇಶ-ವಿದೇಶಗಳಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿದ್ದು ಶ್ರೀ ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು ಬಾನೆತ್ತರಕ್ಕೆ ತೇಲಾಡುವಂತೆ ಮಾಡಿದ್ದಾರೆ. ಅಂತಹವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಹೆಮ್ಮೆಯ ವಿಷಯವಾಗಿದೆ. ಅವರ ಸಾಧನೆ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟರು. ಶ್ರೀ ಗುರು ಪುಟ್ಟರಾಜ ಸೇವಾ ಸಮಿತಿಯವರಿಂದ ಮತ್ತು ಊರಿನ ಗುರು ಹಿರಿಯರು ಹಾಗೂ ಸರ್ವಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಮ್ಮಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.