
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 17 :- ಕೂಡ್ಲಿಗಿ ಕ್ಷೇತ್ರದ ಇತಿಹಾಸದಲ್ಲೇ ಅತ್ಯಧಿಕ ಮತಗಳ ಅಂತರದ ಗೆಲುವು ಸಾಧಿಸಿದ ವೈದ್ಯಕೀಯ ಪದವೀಧರ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಸ್ಥಳೀಯ ಶಾಸಕರಾದ ಡಾ ಶ್ರೀನಿವಾಸ ಇವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕೂಡ್ಲಿಗಿ ತಾಲೂಕು ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ನರಸಿಂಹಗಿರಿ ಪ್ರಹ್ಲಾದ, ಮಾರೆಪ್ಪ, ಮೋಹನ ಮಂಜುನಾಥ ಮಹಾಲಿಂಗಪ್ಪ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಕಳೆದ 1984 ಹಾಗೂ 1989ರಲ್ಲಿ ಎರಡು ಬಾರಿ ಕೂಡ್ಲಿಗಿ ಕ್ಷೇತ್ರದಿಂದ ನೂತನ ಶಾಸಕ ಡಾ ಶ್ರೀನಿವಾಸ ಅವರ ತಂದೆ ಎನ್ ಟಿ ಬೊಮ್ಮಣ್ಣ ಕಾಂಗ್ರೇಸ್ಸಿನಿಂದ ಶಾಸಕರಾಗಿದ್ದರೂ ಸಚಿವರಾಗುವ ಯೋಗ ಅವರಿಗೆ ಕೂಡಿರಲಿಲ್ಲ ಆದರೆ ಅವರ ಪುತ್ರ ಡಾ ಶ್ರೀನಿವಾಸ ಈ ಬಾರಿ ಎಸ್ಟಿ ಮೀಸಲು ಕೂಡ್ಲಿಗಿ ಕ್ಷೇತ್ರದಿಂದ 54ಸಾವಿರಕ್ಕೂ ಅತ್ಯಧಿಕ ಮತಗಳ ಅಂತರದ ಜಯಸಾಧಿಸಿ ಕ್ಷೇತ್ರದ ಐತಿಹಾಸಿಕ ದಾಖಲೆ ಬರೆದ ವೈದ್ಯಕೀಯ ಪದವೀಧರರಾಗಿರುವ ಇವರ ಶೈಕ್ಷಣಿಕ ಆಧಾರದ ಮೇಲೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಿದಲ್ಲಿ ಹಿಂದುಳಿದ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಕೊಟ್ಟು ಅಭಿವೃದ್ಧಿ ಪಥದಲ್ಲಿ ಕೊಂಡೋಯ್ಯಲು ಸಹಕಾರಿಯಾಗಲಿದೆ ಎಂದು ಸರ್ಕಾರಕ್ಕೆ ಮನದಟ್ಟು ಮಾಡುವ ಮೂಲಕ ಡಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೂಡ್ಲಿಗಿ ತಾಲೂಕಿನ ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ಮಾರೆಪ್ಪ, ಪ್ರಹ್ಲಾದ, ಮೋಹನ್, ಮಹಾಲಿಂಗಪ್ಪ ಮಂಜುನಾಥ ಸೇರಿದಂತೆ ಇತರರು ಕಾಂಗ್ರೇಸ್ ವರಿಷ್ಠರಲ್ಲಿ ಒತ್ತಾಯದ ಮನವಿ ಮಾಡಿದ್ದಾರೆ