ಡಾ. ಶಿವುಕುಮಾರ ಮಹಾಸ್ವಾಮಿಗಳ 4ನೇ ಪುಣ್ಯಸ್ಮರಣೆ ಆಚರಣೆ

ಆಳಂದ:ಜ.22: ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ 4ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯ ಜಿಡ್ಡಿಮನಿ ಕಾಂಪ್ಲೆಕ್ಸ್ ಹತ್ತಿರದಲ್ಲಿ ಶನಿವಾರ ದಾಸೋಹ ದಿನವನ್ನು ಆಚರಿಸಲಾಯಿತು.

ಬೆಳಿಗ್ಗೆ ಡಾ. ಶಿವುಕುಮಾರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಪುಷ್ಪಾರ್ಚನೆ ಕೈಗೊಳ್ಳಲಾಯಿತು. ವ್ಯಾಪಾರಿ ಅನಿಲ ಹತ್ತಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬೆಳಂ, ಶರಣಬಸಪ್ಪ ಶಟಗುಂಡ, ಮುರಳಿ ಚಿಂಚೋಳಿ, ಸೂರ್ಯಕಾಂತ ಮಾಳಿ, ನಾಗೇಶ ಸೇರಿದಂತೆ ನೂರಾರು ಭಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.