
ರಾಯಚೂರು,ಏ.೦೮- ನಗರ ಕ್ಷೇತ್ರದ ಹಾಲಿ ಶಾಸಕರಾದ ಡಾ.ಶಿವರಾಜ ಎಸ್. ಪಾಟೀಲ್ ಅವರು ದೀನಾ ದಲಿತರ ಬಂಧು, ಅವರೋಬ್ಬ ಸೃಜನಶೀಲ ರಾಜಕಾರಣಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರನ್ನ ಗೆಲ್ಲಿಸಲು ಕ್ಷೇತ್ರದ ಜನತೆ ತಯಾರಾಗಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ, ಬಿಜೆಪಿ ಮುಖಂಡ ಸಂಜೀವ ರೆಡ್ಡಿ ಏಗನೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ೭೮೭೧ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು, ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ೧೦೯೯೧ ಸಾವಿರ ಮತಗಳ ಅಂತರದಿಂದ ಜಯಗಳಿಸಿದರು.
ಈ ಬಾರಿ ೨೫೦೦೦ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಖಚಿತವೆಂದು ಸಂಜೀವ ರೆಡ್ಡಿ ಏಗನೂರು ತಿಳಿಸಿದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರ ಆಡಳಿತ ನಡಿಸಿದ್ದಾರೆ ನಗರ ಕ್ಷೇತ್ರದಲ್ಲಿ ಕೂಡ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಶಾಸಕರು ಮಾಡಿದ್ದಾರೆ,ಈ ಚುನಾವಣೆಯಲ್ಲಿ ಬಿಜೆಪಿ ಗೆ ಬಹುಮತ ಸಿಗಲಿದೆ ಬಿಜೆಪಿ ಸರಕಾರದಲ್ಲಿ ಶಿವರಾಜ ಎಸ್ ಪಾಟೀಲ್ ಅವರು ೨ಬಾರಿ ಶಾಸಕರಾಗಿದ್ದಾರೆ, ಈ ಬಾರಿ ಶಾಸಕರಾಗುತ್ತಾರೆ. ಅವರು ಖಂಡಿತ ಈ ಸಾರಿ ಸಚಿವರಾಗುತ್ತಾರೆ, ಅವರನ್ನು ಗೆಲ್ಲಿಸುವ ಹೊಣೆ ಕ್ಷೇತ್ರದ ಜನತೆ ಮೇಲೆ ಇದೆ ನಾವೆಲ್ಲರೂ ಅವರ ಜೊತೆಗೆ ಇದ್ದೇವೆ ಎಂದು ತಿಳಿಸಿದರು.