ಡಾ.ಶಿವರಾಜ ಪಾಟೀಲ್ ಮತ ನೀಡಬೇಡಿ

ರಾಯಚೂರು, ಮೇ.೬- ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಶಾಸಕ ಡಾ.ಎಸ್. ಶಿವರಾಜ್ ಪಾಟೀಲ ಅವರಿಗೆ ಮತವನ್ನು ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಲು ಮೈತ್ರಿಕರ್ ಮನವಿ ಮಾಡಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಚುನಾವಣೆಯಲ್ಲಿ ಈ ಬಾರಿ ಡಾ. ಶಿವರಾಜ ಪಾಟೀಲ್ ಅವರನ್ನು ಹೊರತುಪಡಿಸಿ ಅನ್ಯರಿಗೆ ಇಲ್ಲವೇ ನೋಟಾ ಮತ ಚಲಾಯಿಸಬೇಕು ಎಂದ ಅವರು,ಹಾಲಿ ಶಾಸಕರು ಸಮಸ್ಯೆಗಳನ್ನು ಹೇಳಿಕೊಳ್ಳುವ ಮತದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು,ಇಲ್ಲವೇ ಹಲ್ಲೆಗೆ ಮುಂದಾಗುವ ಪ್ರವೃತ್ತಿಯುಳ್ಳವರಾಗಿದ್ದಾರೆ ಎಂದು ಆರೋಪಿಸಿದ ಅವರು, ಶಾಸಕರ ಗಮನಕ್ಕೆ ಹಲವು ಅಕ್ರಮಗಳ ಮಾಹಿತಿಯನ್ನು ನೀಡಿ ಅವುಗಳನ್ನು ತಡೆಗಟ್ಟುವಂತೆ ಮನವಿ ಮಾಡಿಕೊಂಡಿದ್ದರೂ ಆ ಎಲ್ಲ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಶಾಸಕರ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುವುದರಿಂದ ಇವರನ್ನು ಹೊರತು ಪಡಿಸಿ ಯೋಗ್ಯ ಅಭ್ಯರ್ಥಿಯೊಬ್ಬರಿಗೆ ಪ್ರಜ್ಞಾವಂತ ಮತದಾರರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆ.ವಾಗಲು ನರಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.