ಡಾ. ಶಿವರಾಜಕುಮಾರ ಹುಟ್ಟು ಹಬ್ಬ ಆಚರಣೆ

ಮಾನ್ವಿ,ಜು.೧೩-
ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಟ ಡಾ. ಶಿವರಾಜ ಕುಮಾರ ಅವರ ೬೨ ನೇ ಹುಟ್ಟು ಹಬ್ಬದ ಅಂಗವಾಗಿ ಡಾ.ಶಿವರಾಜಕುಮಾರ ಹಾಗೂ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಿಸುವ ಮೂಲಕ ಆಚರಿಸಿದರು.
ನಂತರ ಡಾ.ಶಿವರಾಜಕುಮಾರ ಅಭಿಮಾನಿಗಳ ಬಳಗದ ತಾ.ಅಧ್ಯಕ್ಷ ಕೆ.ಸಾಜೀದ್ ಪಾಷಾ ಮಾತನಾಡಿ ಚಲನಚಿತ್ರ ನಟ ಡಾ. ಶಿವರಾಜ ಕುಮಾರ ಅವರ ೬೨ ನೇ ಹುಟ್ಟು ಹಬ್ಬವನ್ನು ಅವರ ಅಪೇಕ್ಷೆಯಂತೆ ಸಮಾಜಿಕ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜಸ್ವಾಮಿ, ರಾಜೇಶ್, ರೇಣುಕಾರಾಜ್, ಬಸವರಾಜ್ ಬಂಟಿ, ವೀರೇಶ, ಹುಸೇನಿ, ಸಂಗಮೇಶ, ಆವಿನಾಶ, ರಮೇಶ, ದೇವ, ಯಲ್ಲಪ್ಪ, ವೆಂಕಿ, ನಾಯ್ಡು ನಾಯಕ್, ಇಕ್ಬಾಲ್, ಸಬ್ಜಲಿ, ಯಲ್ಲಪ್ಪ, ನಾಗರಾಜ ಕೋರಿ ಸೇರಿದಂತೆ ಇನ್ನಿತರರು ಇದ್ದರು.