ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರಳತೆಯ ಸಾಕಾರಮೂರ್ತಿ

ಮಾನ್ವಿ,ಏ.೧೦- ಮಾನ್ವಿ ಮುಕ್ತಾಗುಚ್ಚಾ ಬೃಹನ್ಮಠ ಕಲ್ಮಠದ ೩ನೇ ಪೀಠಾಧಿಪತಿ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸರಳತೆಯಲ್ಲಿ ಘನತೆ ಕಾಣುವ ಗುಣವನ್ನು ಹಾಗೂ ಸರಳ ಸಜ್ಜನಿಕೆ ಸೌಹಾರ್ದತೆಯ ಮನೋಭಾವವನ್ನು ಮೈಗೊಂಡಿಸಿಕೊಂಡಿದ್ದ ಕಲಠಶ್ರೀಗಳು ನಮ್ಮ ಪಾಲಿಗೆ ಬರೀ ನೆನಪು ಮಾತ್ರ ಎನ್ನುವುದೇ ತುಂಬಾ ದುಃಖಕರ ವಿಷಯವೇ ಸರಿ ಎಂದು ಹಿರಿಯ ಸಾಹಿತಿ ಹಾಗೂ ವಾಗಿ ರಮೇಶಬಾಬು ಯಾಳಗಿ ಕಂಬನಿ ಮಿಡಿದರು.
ಪಟ್ಟಣದ ಕಳಿಂಗ ಪಿಯು ಕಾಲೇಜಿನಲ್ಲಿ ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಕಲ್ಮಠಶ್ರೀಗಳ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಲ್ಮಠದ ಶ್ರೀವಿರೂಪಾಕ್ಷ ಶ್ರೀಗಳ ಕರಕಮಲ ಸಂಜಾತರಗಿದ್ದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಜಾತ್ಯಾತೀತತೆ, ಸರ್ವಧರ್ಮ ಸಮನ್ವಯತೆಯ ತತ್ವವನ್ನು ತಮ್ಮ ಜೀವನದುದ್ದಕ್ಕೂ ಆಳವಡಿಸಿಕೊಂಡಿದ್ದರು. ಕಲ್ಮಠವನ್ನು ಸರ್ವ ಜನಾಂಗದ ತೋಟದಂತೆ ಕಂಗೊಳಿಸುವಂತೆ ಮಾಡಿದ್ದರು ಮತ್ತು ನಾಲ್ಕು ದಶಕಗಳ ಹಿಂದೆ ತಮ್ಮ ಗುರುಗಳ ನಾಮಾಂಕಿತದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಡಿಇಡಿ, ಆಯುರ್ವೇದಿಕ್ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿರುವುದರ ಜೊತೆಗೆ ನೂರಾರು ಜನರಿಗೆ ಉದ್ಯೋಗದಾತರಾಗಿದ್ದರು ಎಂದರು.
ಕಲ್ಮಠಶ್ರೀಗಳ ನುಡಿ ನಮನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ನೀಲಗಲ್ ಬೃಹನ್ಮಠದ ಶ್ರೀರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ ಮಾತನಾಡಿದರು ಶ್ರೀಗಳ ಶಿಕ್ಷಣ ಸಾಧನೆಯ ಕುರಿತು ಮಾತಾನಾಡಿದರು.
ಈ ಸಂದರ್ಭದಲ್ಲಿ ಸಿರವಾರ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಬಲ್ಲಟಗಿ, ಪ್ರಧಾನಕಾರ್ಯದಶಿ ರಾಜು ತಾಳಿಕೋಟಿ, ಅಲ್‌ಹೀರಾ ಶಾಲೆ ಅಧ್ಯಕ್ಷ ಶೇಖ್ ಫರೀದ್ ಉಮ್ರ, ಸರ್ವೋದಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮನೋಜ್ ಕುಮಾರ ಮಿಶ್ರಾ, ಕಳಿಂಗ ಕಾಲೇಜು ಆಡಳಿತ ಮಂಡಳಿ ಸದಸ್ಯ ಡಾ.ರಾಜಶೇಖರ್, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಬಿವಿಆರ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ವಿ.ರೆಡ್ಡಿ, ಹಿರಿಯ ಪತ್ರಕರ್ತ ಬಸವರಾಜ ಭೋಗಾವತಿ, ಎಂ.ವೀರನಗೌಡ ವಕೀಲ, ಎಂಎಎಚ್ ಮುಖಂ, ಅನಿಲ್ ಕುಮಾರ, ರಾಜಾಸುಭಾಶ್ಚಂದ್ರನಾಯಕ, ಮಂಜುನಾಥ ಕಮತರ, ಶಾಂತಮೂರ್ತಿ ಸ್ವಾಮಿ, ಎಂ.ಎಂ.ಹಿರೇಮಠ, ವಿರೂಪಾಕ್ಷಯ್ಯ ಎಂದಲಿ, ರಾಜಶೇಖರ ಕೊಟ್ಟೆಕಲ್, ಸಿದ್ದಮಲ್ಲಯ್ಯ, ಡಾ.ಬಸವರಾಜ ಸುಂಕೇಶ್ವರ, ಶಂಕ್ರಪ್ಪ ನಕ್ಕುಂದಿ ಸೇರಿದಂತೆ ಅನೇಕ ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.