ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

ದೇವದುರ್ಗ.ಏ.೦೪- ಪಟ್ಟಣದ ಎಸ್‌ಎಂಎಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗೆಳೆಯರ ಬಳಗದಿಂದ ತುಮಕೂರು ಸಿದ್ಧಗಂಗಾ ಮಠದ ಶ್ರೀಡಾ.ಶಿವಕುಮಾರ ಸ್ವಾಮೀಜಿಗಳ ೧೧೪ನೇ ಜಯಂತಿ ಇತ್ತಿಚೇಗೆ ಆಚರಿಸಲಾಯಿತು.
ವೀರಶೈವ ಲಿಂಗಾಯತ ಸಮುದಾಯ ತಾಲೂಕು ಅಧ್ಯಕ್ಷ ಡಾ.ಕಿರಣ್‌ಕುಮಾರ ಖೇಣೇದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿ, ನೆಡದಾಡುವ ದೇವರಾಗಿ, ಭಕ್ತರಿಗೆ ತ್ರಿವಿಧ ದಾಸೋಯಿಗಾಗಿ ಹೊರಹೊಮ್ಮಿದ್ದಾರೆ. ಅನ್ನ, ಅಕ್ಷರ, ವಸತಿ ನೀಡಿ ಬಡವರ ಮಕ್ಕಳ ಜೀವನ ಬೆಳಗಿದ್ದಾರೆ. ಅವರ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಹೇಳಿದರು.
ಹಂಪಿ ಕನ್ನಡ ವಿವಿ ಆಡಳಿತ ಮಂಡಳಿ ಸದಸ್ಯ ನಾಗರಾಜ ಅಕ್ಕರಿಕಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ. ನಾಡಿನ ಎಲ್ಲ ಧರ್ಮ, ಜಾತಿ, ಜನಾಂಗದ ಮಕ್ಕಳಿಗೆ ಉಚಿತ ಅಕ್ಷರ ದಾಸೋಹ ಮಾಡಿದ್ದಾರೆ. ಅವರ ನೆನಪುಗಳು ಭಕ್ತರ ಮನದಲ್ಲಿ ಸದಾಕಾಲ ಇರುತ್ತವೆ ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶರಣಗೌಡ ಸುಂಕೇಶ್ವರಾಳ, ಬಸವರಾಜ ಕೊಪ್ಪರ, ಚಂದ್ರಶೇಖರ ಪಾಟೀಲ ಮಿಯ್ಯಪುರ ಮಾತನಾಡಿದರು. ಪ್ರಕಾಶ ಖೆಣೇದ್. ಸುರೇಶ ಪಾಟೀಲ್ ಅಮರಾಪುರ, ಗಂಗನಗೌಡ, ಸುರೇಶ ಅಂಗಡಿ, ಶಾಲೆ ಆಡಳಿತ ಮಂಡಳಿ ಶರಣಮ್ಮ, ಮುದ್ದಪ ಸಾಹುಕಾರ, ಡಾ.ಮಲ್ಲಿಕಾರ್ಜುನ ಗಿಣಿವಾರ, ಶರಣಪ್ಪ ಕೋರಿ ಇತರರಿದ್ದರು.