
ಕಲಬುರಗಿ,ಆ.22-ದೇಶದ 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಂಡ್ಯದ ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಮತ್ತು ಕನ್ನಂಬಾಡಿ ಮತ್ತು ಕಾವೇರಿಪ್ರಭ ಕನ್ನಡ ದಿನಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 31 ನೇ ಕವಿಕಾವ್ಯ ಸಮ್ಮೇಳನದಲ್ಲಿ ಡಾ.ಶಿವಕುಮಾರ. ಲಾ. ಸೂರ್ಯವಂಶ ರವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಮಂಡ್ಯ ನಗರದಲ್ಲಿನ ಗಾಂಧಿ ಭವನದಲ್ಲಿ ಪ್ರತಿಷ್ಠಿತ “ಕನ್ನಡ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವೇದಿಕೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರಗೌಡ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗೇಗೌಡ, ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಹಿರಿಯ ಸಾಹಿತಿ ಅರಕೆರೆ ಸಂತೋಷ ಕುಮಾರ್, ಪತ್ರಕರ್ತ, ಡಾ.ಜೀ.ಶಂ.ಪ.ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಉಪಸ್ಥಿತರಿದ್ದರು.