
ಕಲಬುರಗಿ,ಸೆ.13-ಚುಟುಕು ಬ್ರಹ್ಮ ಎಂದೇ ಖ್ಯಾತಿಯಾದ ದಿನಕರ ದೇಸಾಯಿ ಅವರ ಜನ್ಮ ದಿನದ ಪ್ರಯುಕ್ತ ಕವಿವಾಣಿ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಹಮ್ಮಿಕೊಂಡಿದ್ದ ಅಂತರ್ಜಾಲದ ರಾಜ್ಯಮಟ್ಟದ ಸ್ವರಚಿತ ಚುಟುಕು ರಚನಾ ಸ್ಪರ್ಧೆಯಲ್ಲಿ ಡಾ.ಶಿವಕುಮಾರ.ಲಾ.ಸೂರ್ಯವಂಶ ಅವರು ರಚಿಸಿರುವ ಚುಟುಗಳಿಗೆ ದ್ವಿತೀಯ ಸ್ಥಾನ ನೀಡುವುದರ ಮೂಲಕ ಅವರ ಚುಟುಕು ಸಾಹಿತ್ಯ ಸೇವೆಯನ್ನು ಪರಿಗಣಿಸಿ “ಚುಟುಕು ಶ್ರೀ” ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಗಿದೆ.
ರಾಜ್ಯಮಟ್ಟದ ಚುಟುಗಳ ಸ್ಪರ್ಧೆಗೆ ಬಂದ ಚುಟುಗಳನ್ನು ಕವಿವಾಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎನ್. ಅಕ್ರಂಪಾಷ ಹಾಗೂ ಚುಟುಕು ಸಾಹಿತಿಗಳಾದ ಶಿ. ಮ. ಮಂಜುನಾಥ ಅವರು ಪರಿಶೀಲಿಸಿ ತೀರ್ಪು ನೀಡಲಾಗಿದೆ.