ಡಾ.ಶಿವಕುಮಾರಗೆ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ,ಏ.25-ಡಾ.ಶಿವಕುಮಾರ ಲಾ.ಸೂರ್ಯವಂಶಿ ಅವರ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಗೋಕಾಕನ ಸಮಾಚಾರ ಕನ್ನಡ ದಿನಪತ್ರಿಕೆ “ಬಸವಶ್ರೀ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ಇದೇ ತಿಂಗಳು 23 ರಂದು ಮುಂಬೈನ ” ಮೈಸೂರು ಅಸೋಸಿಯೇಷನ್” ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಡಾ.ಶಿವಕುಮಾರ ಲಾ.ಸೂರ್ಯವಂಶಿ ಅವರಿಗೆ “ಬಸವಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಿಕೆ ಸಂಪಾದಕ ಬಸವರಾಜ ವಾಯ್. ಒಪ್ಪಾರೆಟ್ಟಿ, ಹಿರಿಯ ಸಾಹಿತಿ ಸುರೇಶ ಹೆಗಡೆ, ಶ್ರೀದೇವಿ ಚಂದ್ರಶೇಖರ ರಾವ್, ಡಾ.ಕೊಳಪ್ಪೆ ಗೋವಿಂದ್ ಭಟ್ ಮುಂತಾದವರು ಉಪಸ್ಥಿತರಿದ್ದರು.