ಡಾ. ಶಾಂತಲಿಂಗ ಘಂಟೆಗೆ ಬೇಸ್ಟ್ ಯಂಗ್ ಫೆಕೆಟ್ಲೀ ಅವಾರ್ಡ್

ಕಲಬುರಗಿ:ಜು.12: ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಶಾಂತಲಿಂಗ ಘಂಟೆ ಅವರಿಗೆ ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ನವದೆಹಲಿಯ
” ಸಿದ್ರಾ ಬಹುದೇಶಿಯಾ ವಿಕಾಸ ಸಂಸ್ಥೆಯು ಪ್ರತಿ ವರ್ಷ ವಾರ್ಷಿಕ ಉನ್ನತ ಶಿಕ್ಷಣಕ್ಕಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಯನ್ನು ” ಬೇಸ್ಟ್ ಯಂಗ್ ಫೆಕೆಟ್ಲೀ ಅವಾರ್ಡ್ ” ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರವೇಶ ಮಾಡಿ, ಕಥೆ, ಕಾದಂಬರಿ, ಆತ್ಮಚರಿತ್ರೆ, ನಾಟಕ, ಕವಿ, ಸಂಶೋಧಕ, ಸಾಹಿತಿ, ವಿಮರ್ಶಕ, ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಸಂಶೋಧನೆ ಇತ್ಯಾದಿ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ. ಸಾಹಿತ್ಯದ ಓದು ಅವರ ಹವ್ಯಾಸವಾಗಿದೆ.
ಡಾ. ಶಾಂತಲಿಂಗ ಘಂಟೆ ಅವರು ಉತ್ತಮ ಸಂಶೋಧಕರಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಮಾಡಿ ಒಬ್ಬ ಯುವ ಸಂಶೋಧಕನಾಗಿ ಹೊರಹೊಮ್ಮಿದರಿಂದ ಅವರಿಗೆ ಈ ಅವಾರ್ಡ್ ನೀಡಿ ಗೌರವಿಸಲಾಯಿತು