ಡಾ.ಶರಣಪ್ರಕಾಶ ಪಾಟೀಲಗೆ ಸಚಿವ ಸ್ಥಾನ ನೀಡಲಿ : ವಿಲಾಸ ಗೌತಂ ನಿಡಗುಂದಾ

ಸೇಡಂ, ಮೇ,19: ಡಾ. ಶರಣಪ್ರಕಾಶ ಅವರಿಗೆ ಸಚಿವರಾಗಿ ಮಾಡಿದರೆ ಕಲ್ಯಾಣ ಕರ್ನಾಟಕಕ್ಕೆ ಅಭಿವೃದ್ಧಿ ಹೋಳೆಯನ್ನು ಹರಿಸುವರು. ಈ ಹಿಂದೆ ಸಚಿವರಾದಗ ಅವರು ಕಳಕ ರಹಿತ ಭ್ರಷ್ಟಚಾರ ರಹಿತ ಆಡಳಿತವನ್ನು ನೀಡಿದವರು. ಕಲ್ಯಾಣ ಕರ್ನಾಟಕ ಭಾಗದ 1500ಕೋಟಿಯಲ್ಲಿ 1300ಕೋಟಿ ಖರ್ಚು ಮಾಡಿ ಅಭಿವೃದ್ಧಿಗೋಳಿಸಿದ ಏಕೈಕ ಸಚಿವರು ಡಾ.ಶರಣಪ್ರಕಾಶ ಪಾಟೀಲ ರವರು. ಅಭಿವೃದ್ಧಿಗೆ ಅವರದು ಮೋದಲಿನ ಆದ್ಯತೆ ಇರುತ್ತೆ. ಮಳಖೇಡನಲ್ಲಿ ರಾಷ್ಟ್ರಕೂಟರ ಉತ್ಸವ ಮಾಡಿದರು. ಕೋಟೆಯನ್ನು ಅಭಿವೃದ್ಧಿ ಪಡಿಸಲು ಪಟ್ಟ ತೋಟ್ಟವರು.ಕಲಬುರಗಿ ಜಿಲ್ಲೆಯಲ್ಲಿ ಹೋಸ ಜಯದೇವ ಆಸ್ಪತ್ರೆ ಕಿದ್ವಾಯಿ ಆಸ್ಪತ್ರೆ ಮತ್ತು ಕರ್ನಾಟಕದಲ್ಲಿ ವೈದ್ಯಕೀಯ ಮಹತ್ತರ ಬದಲಾವಣೆಗಳನ್ನು ಡಾ. ಶರಣಪ್ರಕಾಶ ಪಾಟೀಲರು. ಹಾಗೇಯೆ ಕರ್ನಾಟಕದಲ್ಲಿ ಅವರು ಸಚಿವರಾಗಿದಾಗ 12ಮೇಡಿಕಲ್ ಕಾಲೇಜು ಸ್ಥಾಪನೆ ಮಾಡಿದು ಡಾ.ಶರಣಪ್ರಕಾಶ ಪಾಟೀಲರು. ಆದರಿಂದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೇಸ ರಾಷ್ಟ್ರಿಯ ಅಧ್ಯಕ್ಷ ರಾದ ಡಾ.ಮಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿ ಈ ಬೇಡಿಕೆಯನ್ನು ಮಾನ್ಯ ಮಾಡಬೇಕು ಎಂದು ಸೇಡಂ ಬ್ಲಾಕ ಯುವ ಘಟಕದ ಉಪಾಧ್ಯಕ್ಷರಾದ ವಿಲಾಸ ಗೌತಂ ನಿಡಗುಂದಾ ಆಗ್ರಹಿಸಿದಾರೆ.