ಡಾ.ಶರಣಪ್ರಕಾಶ್ ಭರ್ಜರಿ ಗೆಲುವು ಕಾರ್ಯಕರ್ತರಿಂದ ವಿಜಯೋತ್ಸವ

ಸೇಡಂ, ಮೇ,13: ಪಟ್ಟಣದಲ್ಲಿಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಸೇಡಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಭರ್ಜರಿ ಗೆಲುವು ಸಾಧಿಸಿರುವ ಅಂಗವಾಗಿ ಕಾಂಗ್ರೆಸ್ ಯೂಥ್ ಘಟಕದ ವತಿಯಿಂದ ಪಟಾಕಿ ಹಚ್ಚಿ ಸ್ವೀಟ್ ಹಂಚಿ ವಿಜಯೋತ್ಸವ ಆಚರಿಸಿದರು. ಈ ವೇಳೆಯಲ್ಲಿ ಯೂಥ್ ಉಪಾಧ್ಯಕ್ಷ ಸತ್ತರ ನಾಡೆಪಲ್ಲಿ ಸೇರದಂತೆ ಅನೇಕ ಯುವಕರು ಸಂಭ್ರಮಾಚರಣೆಯಲ್ಲಿ ಇದ್ದರು.