ಡಾ. ಶರಣಪ್ರಕಾಶ್ ಪಾಟೀಲ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಸೇಡಂ ಕಾಂಗ್ರೆಸ್ ಕಾರ್ಯಕರ್ತರಿಂದ ಒತ್ತಾಯ

ಸೇಡಂ,ಮೇ,15: ಸೇಡಂ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರಿಗೆ ಈ ಬಾರಿಯೂ ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸ್ಥಾನಗಳನ್ನು ನೀಡಬೇಕೆಂದು ಕಾಂಗ್ರೆಸ್ನ ರಾಜ್ಯನಾಯಕರಿಗೆ ಸೇಡಂನ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೈಯಕ್ತಿಕವಾಗಿ ಸಂಜೆವಾಣಿ ವರದಿಗಾರರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕಾರ್ಯಕರ್ತರು ಕಳೆದ ಬಾರಿ ವೈದ್ಯಕೀಯ ಶಿಕ್ಷಣ ಸಚಿವರಾದಾಗ ಮೆಡಿಕಲ್ ಕ್ಷೇತ್ರದಲ್ಲಿ ಗಣನೀಯವಾಗಿ ಸುಧಾರಣೆ ತಂದಿದ್ದಾರೆ, ಅದೇ ರೀತಿಯಾಗಿ ಈ ಬಾರಿಯೂ
ಉಪಮುಖ್ಯಮಂತ್ರಿ ಜೊತೆಗೆ ಕೃಷಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದಿದರು, ಈ ಬಾರಿಯೂ ಉಪಮುಖ್ಯಮಂತ್ರಿ ಜೊತೆಗೆ ಕೃಷಿ ಸಚಿವ ನೀಡುವ ಮೂಲಕ ರೈತನ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವಂತಹ ಸೂಕ್ತ ವ್ಯಕ್ತಿ
ಡಾ.ಶರಣಪ್ರಕಾಶ್ ಪಾಟೀಲ್ ಜೀ ಅವರಿಗೆ ನೀಡಬೇಕು

ಗೋಪಾಲ ರಾಥೋಡ್
ಕಾಂಗ್ರೆಸ್ ಮುಖಂಡರು ಸೇಡಂ


ಸನ್ಮಾನ್ಯ ಶ್ರೀ ಡಾ,ಶರಣಪ್ರಕಾಶ ಪಾಟೀಲ್ ಸೇಡಂ ರವರಿಗೆ
ಉಪ-ಮುಖ್ಯಮಂತ್ರಿ ಸ್ಥಾನ ದೊರೆಯಲಿ.

ಮಹಿಮೂದಸಾಬ ಎಚ್ ಮದನಾ ಅಧ್ಯಕ್ಷರು,ಯೂಥ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸೇಡಂ
ಡಾ. ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ.

ಫಯಾಜ್ ಇನಾಮ್ದಾರ್
ಕಾಂಗ್ರೆಸ್ ಯುವ ಮುಖಂಡರು ಮಳಖೇಡ