ಡಾ.ಶರಣಪ್ರಕಾಶ್ ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ ಮಳಖೇಡ ಗ್ರಾಮಸ್ಥರು

ಸೇಡಂ, ಮೇ,20: ಇಂದು ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ
ಸಮಾರಂಭಕ್ಕೆ ತೆರಳಿದ ಮಳಖೇಡ ಗ್ರಾಮಸ್ಥರು, ಮುಂಚಿತವಾಗಿ ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ ಅಭಿವೃದ್ಧಿ ಹರಿಕಾರ ಡಾ.ಶರಣಪ್ರಕಾಶ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ್ ಪುರಾಣಿಕ, ಗ್ರಾಪಂ ಸದಸ್ಯರಾದ ದಿನೇಶ್ ಪಾಟೀಲ್, ಅಂಬರೀಷ್ ಎಂ ಗುಡಿ, ಹಾಗೂ ಫಯಾಜ್ ಇನಾಂದಾರ್, ಶ್ರೀಕಾಂತ್ ಎಂ ಗುಡಿ ಶಿವಕುಮಾರ್ ಮಾಲಿ ಪಾಟೀಲ್,ಶಿವಯ್ಯ ಸ್ವಾಮಿ ಶಿವಕುಮಾರ್ ಡನ್ನೂರ್, ಭೀಮಾಶಂಕರ, ಬಸೀರ್ ಶೇಟ್ಟಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.