ಡಾ.ಶರಣಪ್ಪ ಗೋನಾಳರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

ರಾಯಚೂರು.ಡಿ.೦೪-ರಾಯಚೂರಿನ ಖ್ಯಾತ ಜಾನಪದ ಗಾಯಕರಾದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕರಾದ ಡಾ.ಶರಣಪ್ಪ ಗೋನಾಳರವರಿಗೆ ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಜಾನಪದ ತಜ್ಞ ಕೆ.ಆರ್.ಲಿಂಗಪ್ಪ ಅವರ ಹೆಸರಿನಿಂದ ಕೊಡಮಾಡುವ ರಾಜ್ಯಮಟ್ಟದ ಜಾನಪದ ಪ್ರಶಸ್ತಿಯನ್ನು ಚಿತ್ತರಗಿ ಸಂಸ್ಥಾನ ಮಠ ಇಲಕಲ್‌ನಲ್ಲಿ ಇಂದು ಸಂಜೆ ೬.೩೦ ಕ್ಕೆ ನಡೆಯುವ ಸಮಾರಂಭದಲ್ಲಿ ಇಲಕಲ್ ಮಠದ ಪೂಜ್ಯರಾದ ಮ.ನಿ.ಪ್ರ.ಗುರುಮಹಾಂತ ಸ್ವಾಮಿಗಳ ಸಾನಿಧ್ಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋ.ರು.ಚನ್ನಬಸ್ಸಪ್ಪನವರ ಅಧ್ಯಕ್ಷತೆ ವಹಿಸುವರು. ಹುನುಗುಂದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಪಾಟೀಲ್‌ರು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಬಸವರಾಜ ನೆಲ್ಲಿಸರ ಸಾಧಕರನ್ನು ಕುರಿತು ಉಪನ್ಯಾಸ ನೀಡುವರು. ಬಾಗಲಕೋಟೆ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಹುನುಗುಂದಾ ತಾಲೂಕದ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬೆಂಗಳೂರಿನ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಿ.ಅಂಗಡಿಯವರು ತಿಳಿಸಿದ್ದಾರೆ.