ಡಾ. ಶಂಭು ಬಳಿಗಾರ ಬದುಕು ಬರಹ ಸರಣಿ ಉಪನ್ಯಾಸ

ಕಲಬುರಗಿ,ಮಾ.1: ಜಾನಪದ ಕಲೆ ಮತ್ತು ಸಾಹಿತ್ಯವನ್ನು ಹೆತ್ತ ತಂದೆ ತಾಯಿ ಯಿಂದ ಬಳುವಳಿಯಾಗಿ ಪಡೆದು ತಾಯಿಯ ಜಾನಪದ ಹಾಡು ತಂದೆಯ ಬಯಲಾಟದ ಕಲೆಯನ್ನು ಮೈಗೂಡಿಸಿ ಕೊಂಡು ಬೆಳೆದ ಶಂಭು ಬಳಿಗಾರರು ಕನ್ನಡ ನೆಲದ ದೇಶಿಯ ಸಂಸ್ಕøತಿಯನ್ನು ಮತ್ತು ಸಾಹಿತ್ಯವನ್ನು ನಾಲ್ಕೂವರೆ ದಶಕಗಳ ಕಾಲ ದೇಶ ವಿದೇಶಗಳನ್ನು ಸುತ್ತಿ ಬರಹ ಮತ್ತು ಜಾನಪದ ಸಾಹಿತ್ಯದ ಮೂಲಕ,ಜನಪದ ಹಾಡುಗಾರಿಕೆಯ ಮೂಲಕ ಶ್ರಮ ಪಡುತ್ತಾ ಜನಪದ ಸಾಹಿತ್ಯದಲ್ಲಿಅಡಗಿದ ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದುಗಂಗಾಧರ ಬಡಿಗೇರ ಹೇಳಿದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಹಯೋಗದೊಂದಿಗೆ ನಾಡಿನ ಹಿರಿಯ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರ ಬದುಕು ಬರಹ ಸರಣಿ ಉಪ ನ್ಯಾಸ ಹಮ್ಮಿಕೊಂಡ ಸಮಾರಂಭದಲ್ಲಿ ಜಾನಪದದ ನೆಲೆ ಸಾಂಸ್ಕೃತಿಕ ಸೆಲೆ ಜನ ಪದರ ಬದುಕಿನ ಕುರಿತು ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಎಸ್‍ಎಸ್‍ವಿ ಟಿವಿ ಚಾನೆಲ್ ಅಧ್ಯಕ್ಷ ಶಂಕರ ಕೋಡ್ಲಾ ಅವರು ಮಾತನಾಡಿ,ಜಾನಪದ ಉಳಿದರೆ ನಾವು ನೀವು ಉಳಿದಂತೆ ಎಂದು ಹೇಳಿದರು. ಪ್ರಾಂಶುಪಾಲ ಚವಾಣ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದರು. ರಾಘವೇಂದ್ರ ಭುರ್ಲಿಯವರು ಸನ್ಮಾನ ಸ್ವೀಕರಿಸಿದರು.ವೈಷ್ಣವಿ ನಿರೂಪಿಸಿದರು ಉಪನ್ಯಾಸಕ ಎಸ್.ಎಸ್. ಪಾಟೀಲಸ್ವಾಗತಿಸಿದರು.ನಿಂಗಣ್ಣ ಉದನೂರ ವಂದನಾರ್ಪಣೆಮಾಡಿದರು. ಶಿಕ್ಷಕರು ಸಿಬ್ಬಂದಿ ವರ್ಗ, ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ಉಪಸ್ಥಿತರಿದ್ದರು.