ಡಾ ವ್ಹಿ. ಸಿ ಐರಸಂಗ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ


ಧಾರವಾಡ ನ.14- ವಿದ್ಯಾಕಾಶಿಯಲ್ಲಿ ಸಂಗೀತ ಹಾಗೂ ಸಾಹಿತ್ಯದ ಬಗ್ಗೆ ಸೈಕಲ್ ಮೂಲಕ ಕಾಲೇಜು, ಶಾಲೆಗಳಿಗೆ ಹೋಗಿ ಸಾಹಿತ್ಯದ ಬಗ್ಗೆ ಯುವಕರಲ್ಲಿ ಆಸಕ್ತಿ ಮೂಡಿಸುವ ಕೆಲಸ ಡಾ ವ್ಹಿ. ಸಿ ಐರಸಂಗ್ ಮಾಡುತ್ತಿದ್ದರು. ಅವರು 6 ಸಾವಿರ ಕವನ ಸಂಕಲನ ಬರೆದಿದ್ದರು. ಆಕಾಶವಾಣಿ, ದೂರದರ್ಶನಗಳಲ್ಲಿ ಈಗಲೂ ಅವರ ಕವನ ಸಂಕಲನಗಳು ಪ್ರಸಾರವಾಗುತ್ತಿದೆ. ಅವರನ್ನು ಕಳೆದುಕೊಂಡ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ದುಖಃ ತಡೆಯುವ ಶಕ್ತಿ ಆ ದೇವರು ಕೊಡಲೇಂದು ಡಾ ವ್ಹಿ.ಸಿ ಐರಸಂಗ್ ಅವರ ಸಹೋದರ ಸುರೇಶ ಚನ್ನಪ್ಪ ಐರಸಂಗ್, ಹೇಳಿದರು.
ಶ್ರೀರಾಮ ನಗರದಲ್ಲಿ ನಾದ ಝೇಂಕಾರ ಸಾಂಸ್ಕøತಿಕ ಸಂಘದ ಸದಸ್ಯರು ಹಿರಿಯ ಸಾಹಿತಿ ಕವಿ ಡಾ ವ್ಹಿ. ಸಿ ಐರಸಂಗ್ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ಅವರು ತಿಳಿಸಿದರು.
ನಮ್ಮ ಸಂಘದ ಅಧ್ಯಕ್ಷರಾಗಿ ಸುಮಾರು 5-6 ವರ್ಷಗಳಿಂದ ವಿವಿಧ ಸಾಂಸ್ಕøತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಸಂಘದ ಸದಸ್ಯರಿಗೆ ಮಾರ್ಗದರ್ಶಕರಾಗಿದ್ದರು. ಇಂಥಹ ಸರಳತೆಯಲ್ಲಿ ಸರಳತೆ ಇರುವ ವ್ಯಕ್ತಿ ಡಾ ವ್ಹಿ. ಸಿ ಐರಸಂಗ್ ಅವರನ್ನು ಕಳೆದುಕೊಂಡು ಈಗ ನಮ್ಮ ನಾದ ಝೇಂಕಾರ ಸಾಂಸ್ಕøತಿಕ ಸಂಘ ಬಡವಾಗಿದೆ ಎಂದು ನಾದ ಝೇಂಕಾರ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಅವರು ಶ್ರದ್ಧಾಂಜಲಿ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀರಾಮ ನಗರದ ನಿವಾಸಿಗಳು ಮತ್ತು ಹು-ಧಾ ಕೆ.ಪಿ.ಸಿ.ಸಿ ಕಾರ್ಯದರ್ಶಿ ವಸಂತ ಅರ್ಕಾಚಾರ, ಸುರೇಶ ಚನ್ನಪ್ಪ ಐರಸಂಗ್, ಕಾರ್ಯದರ್ಶಿ ಯಮನಪ್ಪ ಜಾಲಗಾರ ಪ್ರಮೋದಕುಮಾರ ಕೆಂಗೆರಿ, ಅನಿತಾ ಆರ್, ಸೃಜನಾ ಕೆ, ಚಂದ್ರಮ್ಮಾ ಕೆ, ಫಕ್ಕಿರಪ್ಪ ಮಾದನಭಾವಿ, ರಮೇಶ ಕುಂಬಾರ, ಶ್ರದ್ಧಾಂಜಲಿ ಸಲ್ಲಿಸಿದರು.