ಡಾ.ವೈ.ನಾಗಪ್ಪಗೆ ಶ್ರದ್ಧಾಂಜಲಿ


ಹರಿಹರ.ನ.೩; ವೈದ್ಯರಾದವರು ಸಮಾಜದ ಸ್ವಾಸ್ಥ್ಯ ಹೇಗೆ ಕಾಪಾಡಬೇಕೆಂಬ ಕಲ್ಪನೆಗೆ ಮಾಜಿ ಸಚಿವ ಡಾ.ವೈ.ನಾಗಪ್ಪ ಮಾದರಿಯಾಗಿದ್ದರು ಎಂದು ಭಾರತೀಯ ವೈದ್ಯಕೀಯ ಸಂಘದ ಖಜಾಂಚಿ ಹಾಗೂ ಹಿರಿಯ ವೈದ್ಯ ಡಾ.ಆರ್.ಆರ್.ಖಮಿತ್ಕರ್ ಹೇಳಿದರು.
ನಗರದ ಶ್ರೇಯಾ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಮಾಜಿ ಸಚಿವ ಡಾ.ವೈ.ನಾಗಪ್ಪರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವೈದ್ಯಕೀಯ ಶಿಕ್ಷಣದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದ ನಾಗಪ್ಪರು ಬಯಸಿದ್ದಲ್ಲಿ ಹೆಚ್ಚಿನ ಸಂಬಳ ನೀಡುವ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡಬಹುದಿತ್ತು. ಆದರೆ ಅವರು ಕೊನೆವರೆಗೂ ಸರಕಾರಿ ಸೇವೆಯಲ್ಲಿಯೆ ಮುಂದುವರೆದು ಬಡವರ ನೋವಿಗೆ ಸ್ಪಂದಿಸಿದರು.ಹಲವು ಜಿಲ್ಲೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ ನಾಗಪ್ಪರು ಅಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿ ಶಾಸಕರಾಗಿ ತಾಲೂಕಿನ ಹಾಗೂ ನಂತರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಹರಿಹರದ ಹೆಸರನ್ನು ಪ್ರಚುರಪಡಿಸಿದ್ದಾರೆಂದರು.ಸಂಘದ ಕಾರ್ಯದರ್ಶಿ ಡಾ.ಗೋಪಿ ಮಾತನಾಡಿ, ವೈದ್ಯರಾಗಿ ಮನುಷ್ಯರ ದೇಹದ ಕಾಯಿಲೆಯನ್ನು ದೂರಗೊಳಿಸುವ ಜೊತೆಗೆ ಬಸವಣ್ಣರ ವಚನಗಳನ್ನು ಹೇಳುತ್ತಾ ಮನಸ್ಸಿನ ಕಾಯಿಲೆಗಳನ್ನು ತೊಡೆದು ಹಾಕಿದ ಕೀತಿ ನಾಗಪ್ಪರಿಗೆ ಸಲ್ಲುತ್ತದೆ ಎಂದರು.ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಮಾತನಾಡಿ, ತಾಲೂಕಿನ ವೈದ್ಯಕೀಯ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ನಾಗಪ್ಪರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಒಬ್ಬ ವೈದ್ಯನಾಗಿ ನಾಡಿನಲ್ಲಿ ಜನಮನ್ನಣೆ ಗಳಿಸಿದ್ದು ವೈದ್ಯ ವೃತ್ತಿಯವರಿಗೆ ಹೆಮ್ಮೆಯ ವಿಷಯವಾಗಿದೆ. ಅವರ ಸಾವು ತಾಲೂಕಿನ ಜನತೆಗೆ ಆಘಾತ ಉಂಟು ಮಾಡಿದೆ ಎಂದರು.
ಆರಂಭದಲ್ಲಿ ಡಾ.ವೈ.ನಾಗಪ್ಪರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಾಗಪ್ಪರ ಪುತ್ರಿ ಡಾ.ರಶ್ಮಿ, ಸಂಘದ ಸದಸ್ಯರಾದ ಡಾ.ಪ್ರವೀಣ್ ಹೆಗಡೆ, ಡಾ.ಸುರೇಶ್ ಬಸರ್‌ಕೋಡ್, ಡಾ.ಮೋಹನ್ ಮೆಹರ್‍ವಾಡೆ, ಡಾ.ಅನಂತರಾಜು, ಡಾ.ಚಂದ್ರಿಕಾ, ಡಾ.ರಾಜಾರಾಮ್, ಡಾ.ನಾಗರಾಜ್ ತೇಲ್ಕರ್, ಡಾ.ಕಿರಣ್ ಹೋವಳೆ ಇತರರಿದ್ದರು.ಫೋಟೊ -೨೪