ಡಾ.ವಿಷ್ಣು ಹುಟ್ಟುಹಬ್ಬ.
ಪ್ರತಿವರ್ಷ ಕೇಕ್ ಕತ್ತರಿಸಿ ಸಂಭ್ರಮಿಸುವ ಕೂಡ್ಲಿಗಿಯ ಬೀದಿಬದಿಯ ಅಂಧಾಭಿಮಾನಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 18:- ಮಾಡುವುದು ಬೀದಿಬದಿಯ ಮೊಬೈಲ್ ಕ್ಯಾಂಟೀನ್ ವ್ಯಾಪಾರ ಆದಕ್ಕೆ  ತನ್ನ ಸಿನಿಮಾ ಹೀರೋ ಹೆಸರನ್ನಿಟ್ಟು ವ್ಯಾಪಾರ ಮಾಡುತ್ತಿದ್ದರೂ  ಅಭಿಮಾನ ಶ್ರೀಮಂತಿಕೆಗೆ  ಅಡ್ಡಿಯಿಲ್ಲ  ತಾನು ದುಡಿಯುವ ಜಾಗದಲ್ಲೇ ಪ್ರತಿವರ್ಷ ಪೆಂಡಾಲ್ ಹಾಕಿ ಹಬ್ಬದ ರೀತಿಯಲ್ಲಿ ಸಂಭ್ರಮ ಆಚರಿಸಿ ನೆರೆದ ಜನತೆಗೆ ಸಿಹಿಹಂಚುವ ಮೂಲಕ ಬೆಳ್ಳಿತೆರೆಯ ಹಿರಿಯ ನಟ ಡಾ.ವಿಷ್ಣುವರ್ದನ್ ಹುಟ್ಟುಹಬ್ಬ ಆಚರಿಸುವ ಅಂಧಾಭಿಮಾನಿ ಕೂಡ್ಲಿಗಿಯ ಕರೇಗೌಡ ಕುಟುಂಬ.
ಹೌದು ಈತ ದಿವಂಗತ  ಡಾ. ವಿಷ್ಣುವರ್ದನ್ ಅವರ ಪಕ್ಕಾ ಅಭಿಮಾನಿ ಅವರ ನಟನೆ, ಆವರ  ಸಂಭಾಷಣೆಯ ಪದಗಳು,  ಸರಳತೆ ಪ್ರತಿಯೊಂದು ಸಹ ಅಮಲಾಪುರ ಕರೇಗೌಡ ಕುಟುಂಬದ ಆಂಧಾಭಿಮಾನಕ್ಕೆ ಮೂಲಕಾರಣ,  ಆತನೊಬ್ಬ ನಟನಾಗಿ ನೋಡದೆ ತನ್ನ ಜೀವನ ಸರ್ವಸ್ವದ ಸ್ಫೂರ್ತಿ ಎಂಬಂತೆ ದೇವರ ಸ್ಥಾನದಲ್ಲಿಟ್ಟು ಪ್ರತಿದಿನ ಪೂಜೆ ಸಹ ಸಲ್ಲಿಸುವ ಮತ್ತು ತಾನು ವ್ಯಾಪಾರ ಮಾಡುವ ಮೊಬೈಲ್ ಕ್ಯಾಂಟೀನ್ ಗೆ ಸಾಹಸಸಿಂಹ ಫಾಸ್ಟ್ ಫುಡ್ ಹಾಗೂ ವಿಷ್ಣುಸೇನಾ ಮೊಬೈಲ್ ಕ್ಯಾಂಟೀನ್ ಎಂದು ಹೆಸರಿನಿಟ್ಟಿರುವ ಗೌಡಕುಟುಂಬ  ವಿಷ್ಣು ಅಭಿಮಾನ ಮೆರೆಸಿದ್ದಾರೆ. 
ಸೆಪ್ಟೆಂಬರ್ 17 ಬಂತೆಂದರೆ 10ಕ್ಕೂ ಹೆಚ್ಚು ಕೆಜಿ ತೂಕದ ಕೇಕ್ ಆದರಲ್ಲಿ ವಿಷ್ಣುದಾದಾನ ಭಾವಚಿತ್ರ ಹಾಗೂ ಆ ನಟನ  ಕೆಲ ಹಿತನುಡಿಗಳನ್ನು ಆದರಲ್ಲಿ ಬರೆಯಿಸಿ ತಾನು ವ್ಯಾಪಾರ ಮಾಡುವ ಬೀದಿಬದಿ ಜಾಗವಾದ ಪಾದಗಟ್ಟೆ ಸಮೀಪದ ಜಾಗದಲ್ಲಿ ಪೆಂಡಾಲ್ ಹಾಕಿ ನಟನ ಭಾವಚಿತ್ರವು ಕಂಗೊಳಿಸುವಂತೆ ಹಾಕುವ ಜೊತೆಗೆ ಕರೇಗೌಡ ತನ್ನ ಕುಟುಂಬವಾದ ಪತ್ನಿ ಲೀಲಾ ಹಾಗೂ ಈತನ ತಂಗಿ ಮಮತಾ ಹಾಗೂ ಅವಳ ಪತಿ ಶರಣಪ್ಪ ಮತ್ತು  ಮಗ ಲೋಕರಾಜ್ ಮತ್ತು ಈ ಸಂಭ್ರಮದಲ್ಲಿ ಕರೇಗೌಡನ ತಂದೆ ತಾಯಿ  ಸಹ ಸೇರಿ ವಿಷ್ಣು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ,  ಅಣ್ಣನ ಹಾದಿಯಲ್ಲಿ ತಂಗಿ ಮಮತಾ ಹಾಗೂ ಪತಿ ಶರಣಪ್ಪ ಪ್ರತಿವರ್ಷದಂತೆ ಆಚರಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು ಇಂದು ವಿಷ್ಣು ಅಭಿಮಾನಬಳಗ ಮತ್ತು ಬೀದಿಬದಿ ವ್ಯಾಪಾರಿಗಳ ಸಹಯೋಗದೊಂದಿಗೆ  ಸೇರಿ ಪಟ್ಟಣದ ಗಣ್ಯರನ್ನು ಡಾ.ವಿಷ್ಣುವರ್ದನ್ ಅವರ 72ನೇ ಹುಟ್ಟುಹಬ್ಬಕ್ಕೆ  ಸುಮಾರು ಹತ್ತು ಕೆ ಜಿ ಗೂ  ಹೆಚ್ಚು ತೂಕವಿರುವ ಕೇಕ್ ತಂದು ಕತ್ತರಿಸಿ ನೆರೆದ ವಿಷ್ಣು ಅಭಿಮಾನಿ ಬಳಗಕ್ಕೆ  ಸಿಹಿ ಹಂಚಿ ಸಂಭ್ರಮಿಸಿದರು.  
 ಇಂದು ಬೆಳಿಗ್ಗೆ  ವಿಷ್ಣು ಹುಟ್ಟುಹಬ್ಬದ ಸಂಭ್ರಮವಾಗಿ ಆತನ ನಟನೆಯ ಸೂರ್ಯವಂಶ ಸಿನಿಮಾದ ಸಂಭಾಷಣೆ ತುಣುಕಾದ ಯಾವುದೇ ಹುಳಿ ಪೆಟ್ಟು ಪೆಟ್ಟು ಎಂದು ತಿಳಿದುಕೊಂಡರೆ ಕಲ್ಲು ಶಿಲೆಯಾಗಲ್ಲ ಎನ್ನುವ ಸಾಲಿನ ನುಡಿಯನ್ನು ಕೇಕ್ ನಲ್ಲಿ ಬರೆಸಿದ್ದು ಅದು ನೆರೆದ ಜನತೆಯ ಮನಸ್ಸನ್ನು ಆಕರ್ಷಿಸಿತು.
ಪಟ್ಟಣದ ಪ್ರಮುಖ ಗಣ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಬಂಗಾರು ಹನುಮಂತು, ಟಿ ಜಿ ಮಲ್ಲಿಕಾರ್ಜುನ ಗೌಡ, ಪ ಪಂ ಸದಸ್ಯರಾದ ಶುಕೂರ್ , ಸಚಿನಕುಮಾರ ರವರುಗಳು ಡಾ. ವಿಷ್ಣುವರ್ಧನ್ ಅವರ ಆದರ್ಶ ಸರಳ ಜೀವನ  ಮತ್ತು ಅವರ ಕನ್ನಡಾಭಿಮಾನ, ಕೂಡ್ಲಿಗಿ ಅಭಿಮಾನಿ ಬಳಗದವರು ಕುರಿತು ಆಚರಿಸುವ ಅವರ ಹುಟ್ಟುಹಬ್ಬದ ಕುರಿತು ಮಾತನಾಡಿದರು.  ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಸುಧಾಕರ, ಸಂದೀಪ ಗೌಡ, ಸಿನಿಮಾ ಕಿಟ್ಟಣ್ಣ, ಜಯರಾಮನಾಯಕ , ವೀರಭದ್ರಪ್ಪ, ಟೈಲರ್ ಸಿದ್ದಣ್ಣ, ನಾರಾಯಣ, ಅಜೇಯ, ಸೊಲ್ಲೆಶ, ಬೀದಿಬದಿ ವ್ಯಾಪಾರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಜನರು ಈ ಸಂಭ್ರಮದಲ್ಲಿ ಭಾಗವಹಿಸಿ ಡಾ.ವಿಷ್ಣು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.