ಡಾ.ವಿಕ್ರಮ್‍ಸಿದ್ದಾರೆಡ್ಡಿ, ಡಾ.ಅಮರೇಶ್‍ಗೆ ಶಾಂತಶ್ರೀ ಪ್ರಶಸ್ತಿ

ಕಲಬುರಗಿ ಸೆ 9: ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ನೀಡಲಾಗುವ ಕನ್ನಡದ ಕಟ್ಟಾಳು, ಜೇವರಗಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ದಿ.ಶಾಂತಪ್ಪಗೌಡ ಪಾಟೀಲ್ ನರಿಬೋಳ ಸ್ಮರಣಾರ್ಥ ನೀಡುವ ಶಾಂತಶ್ರೀ ಪ್ರಶಸ್ತಿಗೆ ಈ ಬಾರಿ ನಗರದ ಖ್ಯಾತ ವೈದ್ಯ, ಸಮಾಜ ಸೇವಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮತ್ತು ಪ್ಲಾಸ್ಟಿಕ್ ಸರ್ಜನ್ ಡಾ. ಅಮರೇಶ್ ಬಿರಾದಾರ ಅವರನ್ನು ಆಯ್ಕೆಮಾಡಲಾಗಿದೆ ಎಂದು ದಿ.ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ. 12 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಾಳೆ ( ಸೆ.10 ) ಹೃದ್ರೋಗ ಸಮಸ್ಯೆ ಕುರಿತು ವೈದ್ಯರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಸೆ. 12 ಸಂಜೆ 5 ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶಾಂತಶ್ರೀ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು,ಸಾನ್ನಿಧ್ಯವನ್ನು ದೇವಾಪುರ ಮತ್ತು ಸ್ಟೇಷನ್ ಬಬಲಾದದ ಪೂಜ್ಯ ಶಿವಮೂರ್ತಿ ಶಿವಾಚಾರ್ಯರು ವಹಿಸಲಿದ್ದಾರೆ.ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಾಸೀರ್ ಹುಸೇನ್ ಉಸ್ತಾದ್, ಶಿವಕಾಂತ ಮಹಾಜನ್, ಡಾ. ಸಂಜನಾ ಪಾಟೀಲ್, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರವೀಣ ಪಾಟೀಲತೇಗನೂರ,ಭಾಗೀರಥಿ ಗುನ್ನಾಪುರ, ಮಹಾದೇವಿ ಹೆಳವಾರ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವೈದ್ಯರ ಕಾರ್ಯಗಾರ ನಾಳೆ (ಸೆ 10 )ಸಂಜೆ 4 ಗಂಟೆಗೆ ಕನ್ನಡಭವನದ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾನಿಧ್ಯವನ್ನು ಪೂಜ್ಯ ಡಾ.ಅಪ್ಪಾರಾವ ದೇವಿಮುತ್ತ್ಯಾ ಅವರು ವಹಿಸಲಿದ್ದಾರೆ.ಅಭಾ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಶರಣಕುಮಾರ ಮೋದಿ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪದ್ಮರಾಜ ರಾಸಣಗಿ, ಡಾ. ಗುರುಲಿಂಗಪ್ಪ ಎ. ಪಾಟೀಲ್, ಡಾ. ಗಜೇಂದ್ರ ಸಿಂಗ್, ಡಾ. ಪ್ರತಿಮಾ ಕಾಮರೆಡ್ಡಿ, ಡಾ. ಲತಾ ಡಿ ಶೆಟ್ಟಿ, ಡಾ. ಎಮ್‍ಡಿ. ಫಾರೂಕ್ ಖಾನ್ ಇನಾಂದಾರ್, ಡಾ. ಸಂತೋಷ್ ಕಾಮಶೆಟ್ಟಿ, ಡಾ. ದೀಪಕ್ ಧುಮ್ಮನಸೂರೆ, ಡಾ. ಖಾಜೀಮ್ ಆಗಮಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಶರಣಗೌಡ ಪೆÇಲೀಸ್ ಪಾಟೀಲ ನರಿಬೋಳ, ಗುರುರಾಜ ಸುಬೇದಾರ, ರಾಘವೇಂದ್ರ ಕುಲಕರ್ಣಿ, ರಾಮಚಂದ್ರ ನಾಯಕೋಡಿ ಇದ್ದರು