
ಮೈಸೂರು: ಮೇ.12:- ಮೆಡಿಕಲ್ ಕಾಲೇಜಿನಲ್ಲಿ ಕೇರಳದಲ್ಲಿ ನಡೆದಿರುವ ಡಾ. ವಂದನಾ ದಾಸ್ ಅವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಕೇರಳದ ಆರೋಗ್ಯ ಸಚಿವರ ಹಾಗೂ ಪೆÇಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯು ಅತ್ಯಂತ ಅಮಾನವೀಯವಾಗಿದೆ. ಈ ಕೂಡಲೇ ಅವರ ಬೇಜವಬ್ದಾರಿ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಸುಭಾಷ್ ಮಾತನಾಡಿದರು ಕೇರಳ ಆರೋಗ್ಯ ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಿರಿ ಹಾಗೂ ವೈದ್ಯರಿಗೆ ಅಗತ್ಯ ಸುರಕ್ಷಾ ವ್ಯವಸ್ಥೆ ಕಲ್ಪಿಸಿ ಕೇರಳದ ಕೊಟ್ಟರಕರ್ ತಾಲೂಕಿನ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಪೆÇೀಲಿಸರೊಂದಿಗೆ ಬಂದಿದ್ದ ಮಾದಕ ದ್ರವ್ಯ ಸೇವಿಸಿರುವ ವ್ಯಕ್ತಿಯು ಅಲ್ಲಿನ ವೈದ್ಯರ ಮೇಲೆ ಆಕ್ರಮಣ ಮಾಡಿದ್ದರಿಂದ ಡಾ ವಂದನಾ ದಾಸ್ ಹತ್ಯೆಗೊಳಗಾದ್ದಾರೆ. ಸರ್ಕಾರ ಹಾಗೂ ಪೆÇೀಲಿಸರ ನಿರ್ಲಕ್ಷಯದಿಂದ ಇಂತಹ ದುರ್ಘಟನೆ ಘಟಿಸಿದೆ. ಖೈದಿಯನ್ನು ಸಮರ್ಪಕ ರಕ್ಷಣೆಯಿಲ್ಲದೆ ಆಸ್ಪತ್ರೆಗೆ ಕರೆತರಲಾಗಿದೆ. ಖೈದಿಯು ಮಾದಕ ದ್ರವ್ಯ ಸೇವಿಸಿದ್ದಾಗಿಯೂ ಸಮರ್ಪಕ ರಕ್ಷಣೆ ನೀಡದೇ ವೈದ್ಯರ ನಡುವೆ ಬಿಟ್ಟು ವೈದ್ಯರನ್ನು ಅಪಾಯಕ್ಕೆ ತಳ್ಳಿರುವುದು ಪೆÇೀಲಿಸರ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.
ಪೆÇೀಲಿಸರು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಆಗಿರುವ ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕಿತ್ತು ಬದಲಾಗಿ ಆರೋಗ್ಯ ಸಚಿವರು, ವೈದ್ಯೆ ಅನಾನುಭವಿಯಾಗಿದ್ದರಿಂದ ಇಂತಹ ಘಟನೆ ಜರುಗಿದೆ ಎಂಬ ಹೇಳಿಕೆಯು ವೈದ್ಯರ ಕುರಿತಾಗಿ ಸರ್ಕಾರದ ಧೋರಣೆಯು ವ್ಯಕ್ತವಾಗುತ್ತಿದೆ. ಅವರ ಬೇಜವಾಬ್ದಾರಿ ಹೇಳಿಕೆಯನ್ನು ಈ ಕೋಡಲೇ ಹಿಂಪಡೆಯಬೇಕೆಂದು ಎಐಡಿಎಸ್‍ಓ ಆಗ್ರಹಿಸುತ್ತದೆ. ಹಾಗೂ ಸರ್ಕಾರವು ಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು. ವೈದ್ಯರಿಗೆ ರಕ್ಷಣೆ ಖಾತ್ರಿಪಡಿಸುವ ಸಂಪೂರ್ಣ ಜವಾಬ್ದಾರಿ ಸರ್ಕಾರ ವಹಿಸಬೇಕೆಂದು ಎಐಡಿಎಸ್‍ಓ ಆಗ್ರಹಿಸುತ್ತದೆ.
ಪ್ರತಿಭಟನೆಯಲ್ಲಿ ಂIಆSಔ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಸುಭಾಷ್, ಪುಷ್ಪ, ಹೇಮಾ ಚಂದ್ರಿಕಾ, ಹಾಗೂ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.