
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.08 ತಾಲೂಕಿನ ಹೊಸಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ ಸೋಮಶೇಖರ್ ಡಾಕ್ಟರ್ ರಾಧಾಕೃಷ್ಣನ್ ರಾಷ್ಟೀಯ ಶಿಕ್ಷಕರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಶ್ರೀಮಾತಾ ಪ್ರಕಾಶನ ( ರಿ)ಕರ್ನಾಟಕ ಹಾಗೂ ದಿ.ಜರ್ನಿ ಆಫ್ ಸೊಸೈಟಿ( ರಿ) ದೆಹಲಿ ಕೊಡ ಮಾಡುವ 2023 ನೇ ಸಾಲಿನ ಡಾ. ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿಯನ್ನು ಶಿಕ್ಷಣ ಇಲಾಖೆಯಲ್ಲಿ ಗಣನೀಯ ಸಾಧನೆಗೈದ ಶಿಕ್ಷಕರಿಗೆ ಕೊಡಲಾಗುವುದು. ಈ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಟಿ .ಸೋಮಶೇಖರ್ ಅವರಿಗೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ..
ಮಾರ್ಚ್ 12 ರಂದು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ, ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮತ್ತು ರಾಜ್ಯಮಟ್ಟದ ಸಾಧಕರಿಗೆ ಸನ್ಮಾನ ಮತ್ತು ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನಾಗರಾಜ ತಂಬ್ರಹಳ್ಳಿ ತಿಳಿಸಿದ್ದಾರೆ.