ಡಾ.ರಾಜ ಸರಳತೆ ಎಲ್ಲರಿಗೂ ಮಾದರಿ

ಧಾರವಾಡ,ಏ25: ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ತೇಜಸ್ವಿ ಕಟ್ಟೀಮನಿ ಅವರು ಧಾರವಾಡ ಕಟ್ಟೆ ಆಯೋಜಿಸಿದ ಡಾ ರಾಜಕುಮಾರ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಡಾ.ರಾಜಕುಮಾರ ಕೇವಲ ಒಬ್ಬ ನಟರಾಗಿರದೆ, ನಾಡು-ನುಡಿಗಾಗಿ ಹೋರಾಡಿದ ಪ್ರಜ್ಞಾವಂತ ಚಳುವಳಿಗಾರರಾಗಿದ್ದರು. ಅವರ ವಿನಯತೆ, ಸರಳತೆ ಪ್ರತಿಯೊಬ್ಬರಿಗೂ ಮಾದರಿಯಾಗಿತ್ತು. ಅವರ ನಡೆ -ನುಡಿಯಲ್ಲಿ ಭೇದವಿರಲಿಲ್ಲ ಎಂದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ ಎಮ್.ವ್ಹಿ.ಅಳಗವಾಡಿ ಅವರು ಮಾತನಾಡುತ್ತ ಡಾ.ರಾಜ್ ಅವರು ಒಬ್ಬ ಕಾಯಕಯೋಗಿಯಾಗಿದ್ದರು. ಅವರ ಪ್ರತಿಯೊಂದು ಪಾತ್ರಗಳು ಸಮಾಜಕ್ಕೆ ಒಂದು ಸಂದೇಶ ನೀಡುತ್ತವೆ, ಯೋಗ ಅಭ್ಯಾಸ ಮಾಡಿ ತಮ್ಮ ಕಾಯವನ್ನು ಸದೃಢವಾಗಿಸಿಕೊಂಡು ನಟನೆಯ ಮೂಲಕ ಜನಮಾನಸ ಗೆದ್ದು ರಸಿಕರ ರಾಜ ಎನಿಸಿಕೊಂಡರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲಂಕೇಶ ಪತ್ರಿಕೆಯ ಸಂಪಾದಕ ಮತ್ತು ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಡಾ.ರಾಜಕುಮಾರ ಅವರ ಪಾತ್ರಗಳಲ್ಲಿ ನಾವು ಜಾತ್ಯತೀತ ನಿಲುವನ್ನು ಕಾಣುತ್ತೇವೆ. ಅವರೊಬ್ಬ ಕನ್ನಡ ಭಾμÉಯ ಏಕೀಕರಣದ ರೂವಾರಿಯಾಗಿದ್ದರು. ಡಾ ರಾಜಕುಮಾರ ಗೋಕಾಕ ಚಳವಳಿಯಲ್ಲಿ ಧುಮುಕಿದ ಮೇಲೆ ಅದು ಜನಪರ ಚಳುವಳಿಯಾಗಿ ಮಾರ್ಪಾಡು ಹೊಂದಿತು ಮತ್ತು ರಾಜಕುಮಾರ ಗೋಕಾಕ ಚಳುವಳಿಯ ನೇತೃತ್ವ ವಹಿಸಲು ಪಿ. ಲಂಕೇಶ ಅವರು ಬರೆದ ಸಂಪಾದಕೀಯವೇ ಕಾರಣ ಎಂದು ಹೇಳಿದರು.
ಖ್ಯಾತ ಚಲನಚಿತ್ರ ನಿರ್ದೇಶಕರಾದ ಬಿ.ಎಂ.ಲಿಂಗದೇವರು ಮಾತನಾಡುತ್ತ, ಡಾ.ರಾಜ್ ಸಮಯ ಪ್ರಜ್ಞೆಯ ಸಾಧಕರಾಗಿದ್ದರು. ಅವರೆಂದೂ ರಾಜಕೀಯ ಸೇರಬಯಸಲಿಲ್ಲ. ಕನ್ನಡದ ಜನ ಯಾವುದೇ ವಿಪತ್ತಿಗೊಳಗಾದಾಗ ತಕ್ಷಣವೇ ಅವರು ಸ್ಪಂದಿಸುತ್ತಿದ್ದರು. ಅಲ್ಲದೇ ಗುಜರಾತದ ಪ್ರಕೃತಿ ವಿಕೋಪದ ಸಂದರ್ಭದಲ್ಲಿಯೂ ಅವರು ತಮ್ಮ ಸಹಾಯಹಸ್ತ ಚಾಚಿ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದರು ಎಂದು ಹೇಳಿದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠರು ಮಾತನಾಡಿ ಡಾ.ರಾಜಕುಮಾರ ಅವರ ಚಿತ್ರಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಾಣುತ್ತೇವೆ. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವುದು ಅವರಿಗೆ ಸಿದ್ಧಿಯಾಗಿತ್ತು ಎಂದು ಹೇಳಿದರು.
ಧಾರವಾಡ ಕಟ್ಟೆಯ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಭಾಗ್ಯಶ್ರೀ ವಿರಕ್ತಮಠ ವಂದಿಸಿದರು. ಸಮಂತ ದೇವು ಪತ್ತಾರ ತಾಂತ್ರಿಕವಾಗಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿμï ವಿಭಾಗ ಮುಖ್ಯಸ್ಥ ಪೆÇ್ರ.ಎನ್.ಎಸ್.ಗುಂಡೂರರು,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಮಾನವಿಕ ಮತ್ತು ಭಾμÁ ನಿಕಾಯದ ಡೀನ್ ಪೆÇ್ರ.ಬಸವರಾಜ ಡೋಣೂರ, ಪೆÇ್ರ.ಧನವಂತ ಹಾಜವಗೋಳ, ಸುರೇಶ ಹೆಗಡಿ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಮೇಟಿ ಮಲ್ಲಿಕಾರ್ಜುನ, ಡಾ.ರಾಜಶೇಖರ ಹತಗುಂದಿ, ಡಾ.ಜಯದೇವಿ ಜಂಗಮಶೆಟ್ಟಿ, ಡಾ.ಪ್ರಭುರಾಜ ಕೆ.ಎನ್., ಪೆÇ್ರ.ವೀಣಾ ಬಿರಾದಾರ, ಡಾ.ಗೀತಾ, ಡಾ.ಮುಕುಂದ ಲಮಾಣಿ, ಅರವಿಂದ ಕುಲಕರ್ಣಿ, ಶಾಂತವೀರಯ್ಯ ಕಳ್ಳಿಮಠ, ಶಿವಾನಂದ ಯಾಳಗಿ, ಡಾ.ಮಮ್ತಾಜ ಬೇಗಂ ಮುಂತಾದವರು ಭಾಗವಹಿಸಿದ್ದರು.