ಡಾ.ರಾಜ್ ಮಾಸದ ನೆನಪು-ಶ್ರೀನಿವಾಸ್

ಕೋಲಾರ,ಏ.೨೫: ಪಟ್ಟಣದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಕಛೇರಿಯಲ್ಲಿ ಬೇಕರಿ ಶ್ರೀನಿವಾಸ್‌ರವರ ನೇತೃತ್ವದಲ್ಲಿ ಡಾ.ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು, ಪ್ರತಿವರ್ಷ ಏಪ್ರಿಲ್ ತಿಂಗಳು ಬಂದರೆ ಸಾಕು ಡಾ.ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಕನ್ನಡ ಉತ್ಸವ ಎನ್ನುವಂತೆ ಆಚರಿಸುತ್ತಾರೆ. ಡಾ.ರಾಜ್‌ಕುಮಾರ್ ಅವರು ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಸುಮಾರು ಶೇ೧೦೦ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ. ಕನ್ನಡದ ಚಿತ್ರ ರಸಿಕರ ಮನದಲ್ಲಿ ಅಣ್ಣಾವ್ರು ಎಂದೆ ಜನಜನಿತರಾದ ಡಾ.ರಾಜ್‌ಕುಮಾರ್ ಅವರಿಗೆ ಇಂದು ೯೨ನೇ ಜನ್ಮದಿನದ ಸಂಭ್ರಮ. ತಮ್ಮ ನಟನೆಯಿಂದಲೇ ಐದು ದಶಕಗಳ ಕಾಲ ಚಂದನವನದ ದೊರೆಯಾಗಿ ಮೆರೆದ ರಾಜಕುಮಾರ್ ಅವರನ್ನು ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಲಾಗುತ್ತದೆ.
ಅಷ್ಟೆಅಲ್ಲದೇ ಐತಿಹಾಸಿಕ ಸಾಮಾಜಿಕ, ಪೌರಾಣಿಕ, ಹಾಸ್ಯ, ಹೀಗೆ ಹಲವು ಬಗೆಯ ಪಾತ್ರಗಳ ಮೂಲಕ ತಮ್ಮದೇ ಆದ ಛಾಪನ್ನು ರಾಜಕುಮಾರ್ ಭಾರತೀಯ ಸಿನಿಮಾ ರಂಗದಲ್ಲಿ ಉಳಿಸಿಹೋಗಿದ್ದಾರೆ. ಇಂತಹ ಮಹಾನ್ ನಟ ನಿಧನರಾಗಿ ದಶಕಗಳಿಗೂ ಹೆಚ್ಚು ವರ್ಷವಾಗುತ್ತಾ ಬಂತು. ಆದರೆ ಇಂದಿಗೂ ಕೂಡ ರಾಜ್‌ಕುಮಾರ್ ಕನ್ನಡ ಮಟ್ಟಿಗೆ ಜೀವಂತ ಸಾಕ್ಷಿ ಪ್ರಜ್ನೆಯಾಗಿದ್ದಾರೆ. ಪ್ರತಿ ವರ್ಷ ಏಪ್ರಿಲ್ ೨೪ ಬಂದರೆ ಸಾಕು ಕರ್ನಾಟಕದ ಮಟ್ಟಿಗೆ ಮತ್ತೊಂದು ರಾಜ್ಯೋತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ.
ಆಗಾಗಿ ಡಾ.ರಾಜ್‌ಕುಮಾರ್ ಕನ್ನಡ ನಾಡು ನುಡಿ, ಜಲ, ಸಂಸ್ಕೃತಿಯ ಬಗ್ಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನೆನೆಪು ಮತ್ತು ಕೊಡುಗೆ ಚಿರಕಾಲ ಶಾಶ್ವತ ಎಂದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಬೇಕರಿ ಶ್ರೀನಿವಾಸ್ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕವಿಗಳಾದ ಜಿ.ಟಿ.ರಾಮಚಂದ್ರಪ್ಪ, ಪ್ರಸಾದ್, ಮುರಳಿ, ಅಯ್ಯಪ್ಪ, ಕನ್ನಡ ಜಾಗೃತಿ ವೇದಿಕೆ, ತಾ.ಅಧ್ಯಕ್ಷ ಆರ್.ರಮೇಶ್‌ಗೌಡ, ಆನಂದಪ್ಪ, ಜಗದೀಶ್, ಕರಾಟೆ ವೆಂಕಟರಾಮ್, ಇನ್ನೂ ಮುಂತಾದವರು ಭಾಗವಹಿಸಿದ್ದರು.