ಡಾ. ರಾಜ್‍ಕುಮಾರ್ ಸರಳ ಜನ್ಮದಿನಾಚರಣೆ

ಮೈಸೂರು:ಏ:24: ಡಾ:ರಾಜ್ ಕುಮಾರ್ ರವರ ಹುಟ್ಟು ಹಬ್ಬದ ದಿನಾಚರಣೆಯನ್ನು ಬೆಳಿಗ್ಗೆ 10.00 ಕ್ಕೆ ಅರಮನೆ ಮುಂಬಾಗದಲ್ಲಿರುವ ಡಾ. ರಾಜಕುಮಾರ್ ಉದ್ಯಾನವನದಲ್ಲಿ ಡಾ. ರಾಜ್ ಕುಮಾರ್ ರವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಲಾಯಿತು
ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರರವರು, ಮಾಜಿ ಮಹಾಪೌರರು ಹಾಗೂ ಭಾ.ಜ.ಪ ಮುಖಂಡ ಸಂದೇಶ್ ಸ್ವಾಮಿ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮೀದೇವಿ, ಚಾಮರಾಜ ಭಾ.ಜ.ಪ ಉಪಾಧ್ಯಕ್ಷ ಕುಮಾರಗೌಡ, ಮೈಸೂರು ಒಕ್ಕಲಿಗರ ಸಂಘದ ನಿರ್ದೇಶಕ ರವಿರಾಜಕೀಯ, ವಿಕ್ರಂಅಯ್ಯಂಗಾರ್,ನವೀನ್, ಸುಚೀಂದ್ರ ಮುಂತಾದವರು ಹಾಜರಿದ್ದರು.