ಡಾ.ರಾಜ್‌ಕುಮಾರ್ ಸರಳ ಜಯಂತಿ ಆಚರಣೆ

ದಾವಣಗೆರೆ,ಏ.25; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ  ಡಾ.ರಾಜಕುಮಾರ್ ಜಯಂತಿಯನ್ನು ಕೋವಿಡ್ ಮಾರ್ಗಸೂಚಿಯನ್ವಯ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಅಶೋಕಕುಮಾರ್.ಡಿ, ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ಸಿಬ್ಬಂದಿಗಳಾದ ಚನ್ನಕೇಶವ ಎನ್, ಶೈಲ.ಎ.ಸಿ, ಗಂಗಾಧರ್, ಬಸವರಾಜ್, ಅಪ್ರಂಟಿಸ್‌ಗಳಾದ ಗೌರಮ್ಮ, ಪ್ರೀತಿ, ಮಾಲತಿ, ಶಿವಕುಮಾರ್ ಇದ್ದರು.