ಡಾ.ರಾಜ್‍ಕುಮಾರ್ 95ನೇ ಜಯಂತಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ

ಚಾಮರಾಜನಗರ, ಏ.25:- ವರನಟ ಡಾ. ರಾಜಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ವಿಶ್ವ ಮಾನವ ಡಾ.ರಾಜ್ ಸೇವಾ ಸಮಿತಿ ಹಾಗೂ ಅಪ್ಪು ಬ್ರಿಗೇಡ್ ವತಿಯಿಂದ ನಗರದ ಸರ್ಕಾರಿ ಅಸ್ಪತ್ರೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ವಿಶ್ವ ಮಾನವ ಡಾ. ರಾಜ್ ಸೇವಾ ಸಮಿತಿ ಗೌರವಾಧ್ಯಕ್ಷ ಚಾಮುಲ್ ಮಾರುಕಟ್ಟೆ ಅಧಿಕಾರಿ ರಾಘವೇಂದ್ರ ರಾವ್ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆದು 15 ಮಂದಿ ರಕ್ತದಾನ ಮಾಡುವ ಮೂಲಕ ಡಾ. ರಾಜ್‍ಕುಮಾರ್ ಅವರು ಜಯಂತಿ ಶುಭ ಕೋರಿದರು.
ಡಾ.ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಸಮಿತಿಯ ಗೌರವ ಅಧ್ಯಕ್ಷ ರಾಘವೇಂದ್ರ ರಾವ್, ಚಾಮರಾಜನಗರ ಜಿಲ್ಲೆಯ ವರಪುತ್ರ ಡಾ. ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಮಹತ್ತರ ಸಾಧನೆ ಮಾಡಿದ ಮಹಾಪುರುಷರು.
ನಮ್ಮ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇಂಥ ಕಲಾವಿದರನ್ನು ಕೊಟ್ಟ ಜಿಲ್ಲೆ ನಮ್ಮದು. ಕರ್ನಾಟಕದಲ್ಲಿಯೇ ಬºಳ ವಿಶಿಷ್ಟವಾಗಿ ರಕ್ತದಾನ ಮಾಡುವ ಮೂಲಕ ಡಾ.ರಾಜ್ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ಮಹೇಶ್, ಅಪ್ಪು ಬ್ರೇಗೇಡ್ ಅಧ್ಯಕ್ಷ ಮಣಿರಾಜು, ಉಪಾಧ್ಯಕ್ಷ ಅರ್ಜುನ್, ಬಾಲಾಜಿ, ಪ್ರಮೋದ್, ಭರತ್, ಪ್ರಮೋದ್‍ಪ್ರಸಾಧ್, ಮಹದೇವಪ್ರಸಾದ್, ಕುಮಾರ್, ವೆಂಕಟೇಶ್, ಪ್ರೇಮ್ ಮೊದಲಾದವರು ಇದ್ದರು.