ಡಾ.ರಾಜ್‍ಕುಮಾರ್ ಮರೆಯಲಾಗದ ಮಾಣಿಕ್ಯ

ಮೈಸೂರು: ಏ.24:- ಡಾ.ರಾಜ್‍ಕುಮಾರ್ ಅವರು ಮರೆಯಲಾಗದ ಮಾಣಿಕ್ಯ. ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು ಎಂದು ಲಯನ್ ಮಾಜಿ ರಾಜ್ಯಪಾಲ ಕೆ. ದೇವೇಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ, ಶ್ರೀ ಸಾಯಿ ಮೆಲೋಡಿಸ್ ಸಂಯುಕ್ತವಾಗಿ ಶನಿವಾರ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಡಾ.ರಾಜ್‍ಕುಮಾರ್ ಜನ್ಮದಿನ, ಡಾ.ರಾಜ್ ಗಾನ ಸವಿಸಂಜೆ ಹಾಗೂ ಅಭಿನಂದನಾ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿ, ಕೆಲವರು ನೂರು ವರ್ಷ ದಾಟಿದರೂ ಬದುಕುತ್ತಾರೆ. ಆದರೆ ರಾಜ್‍ಕುಮಾರ್ ಅವರು ಇನ್ನಷ್ಟು ವರ್ಷ ಕಾಲ ಬದುಕಿರಬೇಕಿತ್ತು ಎನ್ನವಾಗಲೇ ನಮ್ಮಿಂದ ದೂರವಾದರು ಎಂದರು.
ಡಾ.ರಾಜ್‍ಕುಮಾರ್ ಅವರ ದಾರಿಯಲ್ಲಿಯೇ ಅವರ ಪುತ್ರ ಪುನೀತ್‍ರಾಜ್‍ಕುಮಾರ್ ಅವರು 46 ನೇ ವಯಸ್ಸಿಗೆ ನಿಧನರಾಗಿದ್ದು ಮತ್ತೊಂದು ದುರಂತ ಎಂದು ಅವರು ವಿಷಾದಿಸಿದರು. ಮೂರು ಸಂಘಟನೆಗಳು ಸೇರಿ ಡಾ.ರಾಜ್‍ಕುಮಾರ್ ಅವರ ಜನ್ಮದಿನ ಹಾಗೂ ಅವರ ಹಾಡುಗಳ ಗಾಯನ ಏರ್ಪಡಿಸಿರುವುದು ಉತ್ತಮ ಕಾರ್ಯ ಎಂದು ಅವರು ಶ್ಲಾಘಿಸಿದರು.
ಆತ್ಮಕಥೆ ಬರಲು ಭಯ-ಸಿಪಿಕೆ
ಸನ್ಮಾನ ಸ್ವೀಕರಿಸಿದ ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಪೆÇರ.ಸಿಪಿಕೆ ಮಾತನಾಡಿ, ನನ್ನ ಬದುಕು, ನನಗೆ ಬಂದ ಪ್ರಶಸ್ತಿಗಳು ಎಲ್ಲವೂ ವಿಚಿತ್ರ. ಕೆಲವರು ಆತ್ಮಕಥೆ ಬರೆಯಿರಿ ಎನ್ನುತ್ತಾರೆ. ಆತ್ಮ ಇರೋರು ಬರೆಯಲಿ ಎಂದು ವಿನೋದಕ್ಕೆ ಹೇಳುತ್ತೇನೆ. ಆದರೆ ಆತ್ಮಕಥೆ ಬರೆದರೂ ಎಲ್ಲಾ ಸಂಗತಿಗಳು ಪ್ರಾಮಾಣಿಕವಾಗಿರುವುದಿಲ್ಲ ಎಂಬ ಹಿಂಜರಿಕೆ ಕಾರಣ ಎಂದರು.
ಮತ್ತೊರ್ವ ಸನ್ಮಾನಿತ ಖ್ಯಾತ ಮನೋವೈದ್ಯ ಡಾ.ಬಿ.ಎನ್. ರವೀಶ್ ಮಾತನಾಡಿ, ನಮ್ಮನ್ನು ನಾವು ಪುನರ್ ಸಂಶೋಧನೆ ಮಾಡಿಕೊಳ್ಳಬೇಕು. ಸಂಸ್ಕøತಿ ಉಳಿವಿನ ಕಡೆಗೆ ಗಮನಕೊಡಬೇಕು ಎಂದರು.
ಗಂಗರ ಬಗ್ಗೆ ಮದ್ರಾಸ್ ವಿವಿಯ ತಮಿಳು ಸೆಲ್ಲಿಯವರು ಸಂಶೋಧನೆ ಮಾಡಿದ್ದಾರೆ. ಆದರೆ ಸರ್ಕಾರ ಹಾಗೂ ಸಮಾಜದ ಕಣ್ಣಿಗೆ ತಲಕಾಡಿನ ಗಂಗರು ಬೀಳುತ್ತಿಲ್ಲ. ಹಿತ್ತಲಗಿಡ ಮದ್ದಲ್ಲ ಎನ್ನುತ್ತಾರೆ ಎಂದು ಅವರು ವಿಷಾದಿಸಿದರು.
ಗಂಗರ ಬಗ್ಗೆ ನಾನು ಬರೆದ ಇಂಗ್ಲಿಷ್ ಪುಸ್ತಕ್ಕೆ ಪೆÇ?ರ.ಬಿ.ಷೇಕ್ ಅಲಿ ಅವರು ತಮ್ಮ 99ನೇ ವಯಸ್ಸಿನಲ್ಲಿ ಮುನ್ನುಡಿ ಬರೆದುಕೊಟ್ಟಿದ್ದರು. ಕನ್ನಡ ಪುಸ್ತಕಕ್ಕೆ ಪೆÇ?ರ.ಸಿಪಿಕೆ ಬರೆದುಕೊಟ್ಟಿದ್ದಾರೆ ಎಂದ ಅವರು, ಮನೋವಿe?ಞÁನ ಹಾಗೂ ಪರಿಸರ ಸಮತೋಲನ ಮಾಡದಿದ್ದಲ್ಲಿ ಸಮಾಜ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೋಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಕುವೆಂಪು, ದೇಜಗೌರಂತೆ ಸಿಪಿಕೆ ಅವರು ಸಾಹಿತ್ಯ ಲೋಕಕ್ಕೆ ದೇವರು ಕೊಟ್ಟ ವರ. ಚುಟುಕು ಮಹಾಕವಿ. ಸಾಹಿತ್ಯ ಲೋಕದ ಗಾರುಡಿಗ. ಮೈಸೂರಿನ ಎಲ್ಲಾ ಸಾಹಿತ್ಯ ಚಟುವಟಿಕೆಗಳಿಗೆ ಸದಾ ಶ್ರೀರಕ್ಷೆಯಾಗಿದ್ದಾರೆ ಎಂದರು.
ಪೆÇ?ರ.ಸಿಪಿಕೆ ಹಾಗ ಡಾ.ಬಿ.ಎನ್. ರವೀಶ್ ಅವರನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಭಿನಂದಿಸಿದರು. ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಸಾಹಿತ್ಯ ಲೋಕ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮುಖ್ಯ ಅತಿಥಿಗಳಾಗಿದ್ದರು. ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರು. ಚಂದ್ರಕಲಾ ಕುಮಾರ್ ನಿರೂಪಿಸಿದರು.
ನಂತರ ಡಾ.ವೈ.ಡಿ. ರಾಜಣ್ಣ, ಎನ್. ಬೆಟ್ಟೇಗೌಡ, ಮರಿಸ್ವಾಮಿ ಸರ್ವಾರ್ಥ, ರಾಣಿ ವರುಣ, ಶ್ರೀಲತಾ ಮನೋಹರ್ ಗಾನ ಸವಿಸಂಜೆ ನಡೆಸಿಕೊಟ್ಟರು.