ಡಾ.ರಾಜ್‍ಕುಮಾರ್ ಜಯಂತಿ ಆಚರಣೆ

ಚಿತ್ರದುರ್ಗ.ಏ.೨೫; ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ 95ನೇ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ  ಸರಳವಾಗಿ ಆಚರಿಸಲಾಯಿತು.
 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಆರ್.ರಾಜು ಅವರು ಡಾ.ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಡಾ.ರಾಜ್ ಕುಮಾರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಿಬ್ಬಂದಿಗಳಾದ ಜಿ.ವೆಂಕಟೇಶ್, ಪಿ.ಎಂ.ವೇಣುಗೋಪಾಲ, ಎಸ್.ಚಂದ್ರಶೇಖರ್, ಎಂ.ಜೆ.ಬೋರೇಶ, ಅಂಜಿನಮೂರ್ತಿ, ಅಂಪ್ರೆಟಿಸ್ ತರಬೇತಾರ್ಥಿ ಕರುಣಾಕರ ಇದ್ದರು.