ಡಾ.ರಾಜಕುಮಾರ ಹುಟ್ಟುಹಬ್ಬ:ಕೆ.ಗೋವಿಂದರಾಜ ಮೆಡಿಕಲ್ ಕಾಲೇಜಿಗೆ ದೇಹದಾನ

ರಾಯಚೂರು.ಏ.೨೫-ಕನ್ನಡ ಚಳುವಳಿ ಕೇಂದ್ರ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಕೆ.ಗೋವಿಂದರಾಜ ಅವರು ಡಾ.ರಾಜಕುಮಾರ ರವರ ೯೩ನೇ ಹುಟ್ಟುಹಬ್ಬದ ಅಂಗವಾಗಿ ತಾವು ಮರಣ ಹೊಂದಿದ ನಂತರ ತಮ್ಮ ದೇಹವನ್ನು ರೀಮ್ಸ್ ಮೆಡಿಕಲ್ ಕಾಲೇಜಿಗೆ ನೀಡಿದರು.
ಅವರು ನಿನ್ನೆ ನಗರದ ಕರ್ನಾಟಕ ಸಂಘದಲ್ಲಿ ಕನ್ನಡ ಚಲನಚಿತ್ರದ ಹಿರಿಯ ನಟ ದಿ.ಡಾ.ರಾಜಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ನಾನು ಮರಣ ಹೊಂದಿದ ನಂತರ ನನ್ನ ದೇಹವನ್ನ ರೀಮ್ಸ್ ಮೇಡಿಕಲ್ ಕಾಲೇಜಿನ ಅಂಗರಚನಾ ಶಾಸ್ತ್ರಕ್ಕೆ (ಅಟೊನಾಮಿ) ವಿಧ್ಯಾರ್ಥಿಗಳಿಗೆ ಅಧ್ಯಯನಕ್ಕೆ ನನ್ನ ದೇಹ ಉಪಯೋಗ ವಾಲೆಂದು ದಾನ ಮಾಡಿದ್ದೇನೆ ಎಂದರು.
ಅವರು ನಿನ್ನೆ ನಗರದ ರೀಮ್ಸ್ ಮೆಡಿಕಲ್ ಕಾಲೇಜಿಗೆ ತರಲಿ ತಾವು ಮರಣ ಹೊಂದಿದ ನಂತರ ನನ್ನ ದೇಹವನ್ನು ನೀಡುತ್ತೇನೆ ಎಂದು ಅರ್ಜಿಯನ್ನು ಸಲ್ಲಿಸಿದ್ದಾರೆ ಡಾ. ರಾಜಕುಮಾರವರು ಮರಣದ ನಂತರ ತಮ್ಮ ಎರಡು ಕಣ್ಣುಗಳನ್ನ ಧಾನ ಮಾಡಿದರು. ಅದು ನನಗೆ ಪ್ರೇರಣೆಯಾಗಿ ನನ್ನ ಮರಣದ ನಂತರ ನನ್ನ ದೇಹ ಮಣ್ಣನಲ್ಲಿ ಕೊಳತು ಹೊಗುವದಕ್ಕಿಂತ, ವಿದ್ಯಾರ್ಥಿ ವೃದಂಕ್ಕೆ ಉಪಯೋಗವಾಲೆಂದು ಸ್ವ ಇಚ್ಛೆ ಯಿಂದ ತಿರ್ಮಾನಿಸಿರುವೆ ಎಂದು ತಿಳಿಸಿದರು.