ಡಾ.ರಾಜಕುಮಾರ ಪುಣ್ಯಸ್ಮರಣೆ ಭಾವಪೂರ್ಣ ಶ್ರದ್ಧಾಂಜಲಿ

ರಾಯಚೂರು, ಏ.೧೨- ಕನ್ನಡ ಚಳುವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ನಗರದ ಕರ್ನಾಟಕ ಸಂಘದಲ್ಲಿ ಪದ್ಮಭೂಷಣ, ವರನಟ, ದಿವಂಗತ ಡಾ. ರಾಜಕುಮಾರ ರವರ ೧೫ ನೇಯ ಪುಣ್ಯಸ್ಮರಣೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಕರವೇ ಗೌರವಾಧ್ಯಕ್ಷ ಕೆ. ಗೋವಿಂದರಾಜ, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ. ಕೆ. ಜೈನ, ಕರವೇ ತಾಲೂಕ ಪ್ರಧಾನ ಕಾರ್ಯದರ್ಶಿ ಸಂಜಯ ವೈಷ್ಣವ್, ಗುರುರಾಜ, ನರಸಿಂಹಲು,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.