ಡಾ. ರಾಜಕುಮಾರ ದಣ್ಣೂರಗೆ ಲಂಡನ್ ಬುಕ್ ಆಫ್ ವಲ್ರ್ಡ್ ರಿಕಾರ್ಡ್ ಅವಾರ್ಡ್

ಕಲಬುರಗಿ:ಆ.4: ನವದೆಹಲಿಯ ಲಂಡನ್ ಬುಕ್ ಆಫ್ ವಲ್ರ್ಡ್ ರಿಕಾರ್ಡ್ ಸಂಸ್ಥೆಯು ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಂ. ದಣ್ಣೂರ ಅವರಿಗೆ ಪತ್ರಿಕೋದ್ಯಮ ಕ್ಷೇತ್ರದ ಶೈಕ್ಷಣಿಕ ಮತ್ತು ಸಂಶೋಧನಾ ಸಾಹಿತ್ಯಿಕ ಮತ್ತು ಬೋಧನಾ ಅನುಭವದ ಸೇವೆಯನ್ನು ಗುರುತಿಸಿ ಅವರಿಗೆ
“ಬೆಸ್ಟ್ ಟೀಚರ್ ಇನ್ ಜರ್ನಾಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ಇಂಟನ್ರ್ಯಾಷನಲ್ ಅವಾರ್ಡ್” ನೀಡಿ ಗೌರವಿಸಿದೆ. ಡಾ. ರಾಜಕುಮಾರ ಎಂ ದಣ್ಣೂರ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪೆÇ್ರ, ಲಕ್ಷ್ಮಣ ರಾಜನಳ್ಕರ್, ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ, ವಿ.ಟಿ ಕಾಂಬಳೆ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಿ. ಕೆ. ಪುಟ್ಟಸ್ವಾಮಿ, ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ, ಡಾ. ಪ್ರವೀಣ್ ಕುಮಾರ್ ಕುಂಬಾರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್ ಜಂಗೆ, ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಎಸ್. ಪಾಸೋಡಿ ಹೋರಾಟಗಾರ ಡಾ. ಗುಂಡಪ್ಪ ಸಿಂಗೆ, ಸಿದ್ದು ದೊಡ್ಡಮನಿ ಇತರರು ಅಭಿನಂದನೆಗಳು ಸಲ್ಲಿಸಿದ್ದಾರೆ.