ಡಾ.ರಾಜಕುಮಾರ್ ಹುಟ್ಟುಹಬ್ಬ :ಸರಳ ಆಚರಣೆ

ರಾಯಚೂರು.ಏ.೨೫-ಕನ್ನಡ ಚಿತ್ರರಂಗದ ಹಿರಿಯ ನಟ ಡಾ.ರಾಜಕುಮಾರ ಅವರ ೯೩ನೇ ಹುಟ್ಟುಹಬ್ಬವನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಿನ್ನೆ ಸಂಜೆ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.
ನಿನ್ನೆ ನಗರದ ಕರ್ನಾಟಕ ಸಂಘದಲ್ಲಿ ಡಾ.ರಾಜಕುಮಾರ ಅವರ ೯೩ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ನಂತರ ಕಾಂಗ್ರೆಸ್ ಮುಖಂಡ ಕೆ. ಶಾಂತಪ್ಪ ಅವರು ಮಾತನಾಡುತ್ತ ರಾಜಕುಮಾರ ಕನ್ನಡದ ಆಸ್ತಿ, ಅವರ ಜೀವನದ ನಡೆ ನುಡಿ ಕನ್ನಡಭಿಮಾನ ನಾವೆಲ್ಲ ಅವರನ್ನ ನೋಡಿ ಕಲಿಯಬೆಕೆಂದರು.
ಚಿತ್ರಕಲಾವಿದ ಎಚ್. ಎಚ್. ಮ್ಯಾದಾರ್ ಮಾತನಾಡುತ್ತ ಡಾ. ರಾಜಕುಮಾರ ಅವರು ನಾನು ಒಬ್ಬ ಅಭಿಮಾನಿ, ಅವರು ನಟಿಸಿದ ೨೦೦ ಚಿತ್ರಗಳಲ್ಲಿ ೧೦೦ ಚಿತ್ರಗಳು ಚುಕ್ಕಿ ಚಿತ್ರಗಳಲ್ಲಿ ಬಿಡಿಸಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಏರ್ಪಡಿಸಿ ಬಿಡುಗಡೆ ಗೊಳಿಸುವೆ. ಈಗಾಗಲೇ ೮೫ ಚುಕ್ಕಿ-ಚಿತ್ರಗಳು ಮಾಡಿ ಮುಗಿಸಿರುವೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಕೆ. ಗೋವಿಂದರಾಜ,ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಜೈನ್,ಹಣಮಂತಪ್ಪ, ಚಿತ್ರಗಾರ ಈರಣ್ಣ ವರ್ಮ, ವೆಂಕಟೇಶ ಯಾದವ್, ಸುಭಾಸ ಗಡ್ಡಾಲೆ, ಸಂಜಯ ವೈಷ್ಣವ್, ಮಲ್ಲು, ಸುರೇಶ ಬೆಂಗಳೂರು, ರಾಮಪ್ಪ ಮ್ಯಾದಾರ, ವೇಣುಕುಮಾರ್, ಅನಿಲ್, ಗುರುರಾಜ, ವೆಕಂಟೇಶ ಯಾದವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.