ಡಾ.ರಾಜಕುಮಾರ್ ಉದ್ಯಾನವನ, ಕೆರೆ ಸ್ಥಳ ಪರಿಶೀಲನೆ

ಬಳ್ಳಾರಿ,ನ.07: ನಗರದ ಡಾ.ರಾಜಕುಮಾರ್ ಉದ್ಯಾನವನ ಹಾಗೂ ಕೆರೆಯನ್ನು 6.28 ಕೋಟಿ ರೂಪಾಯಿ ವೆಚ್ಚದಲ್ಲಿ ಫನ್ ವಡ್ರ್ಲ ಇಲ್ಲವೇ ವಂಡಲಾ ಮಾದರಿಯಲ್ಲಿ ಹಾಗೂ 20 ಲಕ್ಷ ರೂ ವೆಚ್ಚದಲ್ಲಿ ಉದ್ಯಾನವನವನ್ನು ಅಭಿವೃದ್ಧಿ ಪಡಿಸಲು ಕೆರೆ ಅಭಿವೃದ್ಧಿ ಶುಲ್ಕ ಒಟ್ಟು 6.48 ಕೋಟಿ ರೂಪಾಯಿ ಅನುದಾನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲು ಡಿ.ಪಿ.ಆರ್ ಮಾಡಲು ಟೋಟಲ್ ಸ್ಟೇಷನ್ ಸರ್ವೆ ಮಾಡಲು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಿನ್ನೆ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್ ಹಾಗೂ ಇಂಜಿನಿಯರ್ ಪವನ್ ಅವರು ಇದ್ದರು.