ಡಾ. ರವಿಕಿರಣ ನಾಕೊಡ ಅವರಿಗೆ ಸಿಯುಕೆಯ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ

ಕಲಬುರಗಿ:ಡಿ.3:ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗು ಶ್ರೇಷ್ಠ ಹಿಂದೂಸ್ಥಾನಿ ತಬಲಾವಾದಕರಾದ ಡಾ. ರವಿಕಿರಣ ನಾಕೊಡ ಅವರಿಗೆ 2023 ನೇ ಸಾಲಿನ ಪಂಡಿತ್ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಘೋಸಿಸಲಾಗಿದೆ.
ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ), ಧಾರವಾಡನ ಕಾರ್ಯದರ್ಶಿಗಳು ಡಾ. ರವಿಕಿರಣ ನಾಕೊಡ ಅವರಿಗೆ ಬರೆದ ಪತ್ರದಲ್ಲಿ “ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ), ಧಾರವಾಡ ವತಿಯಿಂದ ಪ್ರತಿ ವರ್ಷದಂತೆ ಕೊಡಲ್ಪಡುವ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ-2023ʼ ತಮಗೆ ನೀಡಲಾಗಿದೆ. ಪ್ರಶಸ್ತಿ 25 ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಪ್ರಶಸ್ತಿಯನ್ನು 31 ನೇ ಡಿಸ್ಸೆಂಬರ್ 2023 ರಂದು ಧಾರವಾಡದಲ್ಲಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗಳಿಗೆ ಮಾತನಾಡಿದ ಡಾ. ರವಿಕಿರಣ ನಾಕೊಡರವರು “ಪಂಡಿತ್ ಡಾ. ಮಲ್ಲಿಕಾರ್ಜುನ ಮನಸೂರ ಅವರು ನಾಡು ಕಂಡ ಒಬ್ಬ ಖ್ಯಾತ ಸಂಗೀತಗಾರರು. ಇಂತಹ ಒಬ್ಬ ಕಲಾವಿದರ ಪ್ರಶಸ್ತಿ ಸಿಗುತ್ತಿರುವುದು ನನಗೆ ಬಹಳ ಸಂತೋಷವನ್ನು ತಂದಿದೆ. ನನ್ನ ಸಂಗೀತ ಸಾಧನೆಯನ್ನು ನೋಡಿ ಕನ್ನಡ ಸಂಸ್ಕøತಿ ಇಲಾಖೆ, ಜಿಲ್ಲಾಧಿಕಾರಿಗಳು, ಮತ್ತು ಧಾರವಾಡದ ನಮ್ಮ ಜನರು ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಹಾಗು ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಖ್ಯಾತ ನಾಮರ ಪ್ರಶಸ್ತಿ ಸಿಕ್ಕಿರೋದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಲ್ಲದೆ ಮುಂದೆ ಸಾಕಷ್ಟು ಸಾಧನೆ ಮಾಡಲಿಕ್ಕೆ ನನಗೆ ಪ್ರೇರಣೆಯಾಗಿದೆ” ಎಂದು ಹೇಳಿದರು.
ನಾಡಿನ ಪ್ರಶಿದ್ಧ ಸಂಗೀತಗಾರರೊಂದಿಗೆ ತಬಲಾ ನುಡಿಸಿರುವ ಡಾ. ರವಿಕಿರಣ ನಾಕೊಡ ಅವರಿಗೆ ಅನೇಕ ಪ್ರಶಸ್ತಿ ಮತ್ತು ಬಹುಮಾನಗಳು ದೊರೆತಿವೆ. ಅವರು 2007 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಹೆಚ್.ಡಿ, 2018 ರಲ್ಲಿ ಧಾರವಾಡ ಆಕಾಶವಾಣಿಯಿಂದ “ಟಾಪ್” ಗ್ರೇಡ್ ಕಲಾವಿದ, 2006 ರಲ್ಲಿ ಧಾರವಾಡ ಆಕಾಶವಾಣಿಯಿಂದ “ಎ” ಗ್ರೇಡ್ ಕಲಾವಿದ, 2019 ರಲ್ಲಿ ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ, 2019 ರಲ್ಲಿ ಪಂಡಿತ ಭಿಮಸೇನ ಜೋಶಿ ರಾಷ್ಟ್ರೀಯ ಪುರಸ್ಕಾರ, 1999 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ “ಪ್ರತಿಭಾ ಪುರಸ್ಕಾರ” ವನ್ನು ಪಡೆದಿದ್ದಾರೆ.
ಡಾ. ರವಿಕಿರಣ ನಾಕೊಡ ಅವರಿಗೆ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪ್ರಶಸ್ತಿ ಬಂದಿದಕ್ಕೆ ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ “ಸಿಯುಕೆ ಪ್ರತಿಭಾವಂತ ಪ್ರಾದ್ಯಾಪಕರನ್ನುಳ್ಳ ಒಂದು ರಾಷ್ಟ್ರದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆ. ಇತ್ತೀಚಗೆ ನಮ್ಮ ಪ್ರಾದ್ಯಾಪಕರಿಗೆ ಅನೇಕ ಪ್ರಶಸ್ತಿಗಳು, ಸಂಶೋಧನಾ ಪೆÇ್ರಜೆಕ್ಟಗಳು, ಪೆಟೆಂಟ್ ಗಳು ದೊರೆಯುತ್ತಿರುವುದು ಅತೀವ ಸಂತೋಷದ ಸಂಗತಿ. ನಮ್ಮ ಶಿಕ್ಷಕರು ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಲಿ ಅವರಿಗೆ ಅಗತ್ಯ ಸಹಕಾರ ಮತ್ತು ಸಹಾಯ ನೀಡಲಾಗುವುದು. ಸಂಶೋಧನಾ ಪ್ರಬಂಧಗಳನ್ನು ವಿದೇಶಗಳಲ್ಲಿ ಮಂಡಿಸಲು ಪ್ರತಿ ಶಿಕ್ಷಕರಿಗೆ ಒಂದು ಲಕ್ಷ ರೂ ಧನ ಸಹಾಯವನ್ನು ನೀಡಲಾಗುತ್ತೀದೆ” ಎಂದು ಅವರು ಹೇಳಿದರು.