ಡಾ.ಯೋಗಪ್ಪನ್ನವರ ಸಾಹಿತ್ಯ ಅಭಿರುಚಿ ಶ್ಲ್ಯಾಘನೀಯ

ಬಾದಾಮಿ,ಏ3: ಡಾ.ಎಚ್.ಎಫ್.ಯೋಗಪ್ಪನ್ನವರ ಒಬ್ಬ ಪ್ರಖ್ಯಾತ ವೈದ್ಯರು. ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬಾಗಲಕೋಟೆಯ ಖ್ಯಾತ ಸರ್ಜನ್ ಡಾ.ಬಿ.ಎಚ್.ಕೆರೂಡಿ ಹೇಳಿದರು.
ಅವರು ರವಿವಾರ ಎಸ್.ವಿ.ಪಿ.ಸಂಸ್ಥೆಯ ಬಸವ ಮಂಟಪದಲ್ಲಿ ಡಾ.ಎಚ್.ಎಫ್.ಯೋಗಪ್ಪನವರ ಅಭಿನಂದನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಎಚ್.ಎಫ್.ಯೋಗಪ್ಪನವರ ಅಭಿನಂದನೆ ಹಾಗೂ ಗ್ರಂಥ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು.
ಅಶ್ವದಳ ವಿಶ್ರಾಂತಿ ಕಮಾಂಡೆಂಟ್ ಎಸ್.ಜಿ.ಮರಿಬಾಶೆಟ್ಟಿ ಮಾತನಾಡಿ ವೈದ್ಯಕೀಯ ವೃತ್ತಯಿಂದ ಯೋಗಪ್ಪನ್ನವರ ನಡೆದು ಬಂದ ಬಗೆಯನ್ನು ವಿವರಿಸಿದರು. ಶ್ರೀ ಅಕ್ಕಮಹಾದೇವಿ ಮಹಿಳಾ ವಿ.ವಿ.ವಿಜಯಪುರ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಗ್ರಂಥ ಸಮರ್ಪಣೆ ಮಾಡಿ ಮಾತನಾಡಿ ಡಾ.ಯೋಗಪ್ಪನ್ನವರ ಒಬ್ಬ ಬಹುಮುಖ ಪ್ರತಿಭೆಯ ವೈದ್ಯರು. ಖ್ಯಾತ ವೈದ್ಯರಾಗಿ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿರುವುದು, ಕುಟುಂಬದ ಸದಸ್ಯರ ಕಾಳಜಿ, ಆತ್ಮೀಯತೆ ಇತರರಿಗೆ ಮಾದರಿಯಾಗಿದೆ ಎಂದರು. ವಿಶ್ರಾಂತ ಪ್ರಾಚಾರ್ಯ ಜೆ.ಬಿ.ಶಿಲವಂತರ ಅಭಿನಂದನ ಗ್ರಂಥದ ಪರಿಚಯ ಮಾಡಿದರು.
ಸಂಸ್ಕ್ರತಿ ಚಿಂತಕ ಬಸವರಾಜ ಜಿ.ಭಗವತಿ ಅಭಿನಂದನೆ ನುಡಿಗಳನ್ನಾಡಿದರು. ಡಾ.ಎಚ್.ಎಫ್.ಯೋಗಪ್ಪನವರು ಹಾಗೂ ಮಂಗಲಾ ಎಚ್.ಯೋಗಪ್ಪನವರ ಅಭಿನಂದನೆ ಸ್ವೀಕರಿಸಿದರು. ಉಜ್ವಲ ಬಸರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಡಾ.ಆರ್.ಸಿ.ಭಂಡಾರಿ, ಹಿರಿಯ ಪತ್ರಕರ್ತ ರಾಮ ಮನಗೂಳಿ, ಡಾ.ಶೀಲಾಕಾಂತ ಪತ್ತಾರ, ಡಾ.ಎಂ.ಎಚ್.ಚಲವಾದಿ, ಡಿ.ಎಂ.ಪೈಲ್, ಕಿಮ್ಸ್ ಪ್ರಾಚಾರ್ಯ ಡಾ.ಈಶ್ವರ ಹೊಸಮನಿ, ಆರ್.ಬಿ.ಪಾಟೀಲ, ಉಮಾದೇವಿ ಪಟ್ಟಣಶೆಟ್ಟಿ, ಹೇಮಾ ಬ್ಯಾಳಿ, ಎಸ್.ಎಸ್.ಮೂಲಿಮನಿ, ಜೆ.ಎಸ್.ಮಮದಾಪೂರ, ಎಸ್.ಪಿ.ಹಲಗಲಿಮಠ, ಎಸ್.ಎಸ್.ಹಿರೇಮಠ, ಶಂಕರ ಹಲಕುರ್ಕಿ, ತಾಜುದ್ದೀನ ಕೆರೂರ, ವಿ.ಕೆ.ಶಿವಪ್ಪಯ್ಯನಮಠ, ಎ.ರಾಮಚಂದ್ರಪ್ಪ, ಇಷ್ಟಲಿಂಗ ಶಿರಶಿ, ಮಹಾಂತೇಶ ಮಮದಾಪೂರ ಸೇರಿದಂತೆ ನಗರದ ಮುಖಂಡರು ಅಭಿಮಾನಿಗಳು ಹಾಜರಿದ್ದರು.