ಡಾ. ಯಡವಳ್ಳಿಯವರಿಗೆ “ಭೀಷ್ಮ ಆಚಾರ್ಯ ಪ್ರಶಸ್ತಿ”


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಇಲ್ಲಿನ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್  ಮ್ಯಾನೇಜ್‌ಮೆಂಟ್ ಪ್ರಾಚಾರ್ಯ ಡಾ. ಯಡವಳ್ಳಿ ಬಸವರಾಜ್ ಅವರ ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಭಾರತ್ ಎಜುಕೇಶನ್ ಮತ್ತು ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  “ಭೀಷ್ಮ ಆಚಾರ್ಯ ಪ್ರಶಸ್ತಿ” ನೀಡಿ ಗೌರವಿಸಿದೆ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮುಖ್ಯ ಸಮನ್ವಯ ಅಧಿಕಾರಿ ಡಾ. ಬುದ್ಧ ಚಂದ್ರಶೇಖರ್ ಮತ್ತು ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ.ವಿ.ಜಿ.ಡಿ ಪ್ರಸಾದ್ ರೆಡ್ಡಿ ಮುಂತಾದ  ವ್ಯಕ್ತಿಗಳ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ  ಎಂದು ಡಾ. ಯಡವಳ್ಳಿ ಅವರು  ತಿಳಿಸಿದ್ದಾರೆ‌
ಕಾಲೇಜಿನ ಅಧ್ಯಕ್ಷ ಡಾ. ಯಶವಂತ ಭೂಪಾಲ್, ನಿರ್ದೇಶಕ ವೈ.ಜೆ.ಪೃಥ್ವಿರಾಜ್ ಭೂಪಾಲ್, ಉಪಪ್ರಾಚಾರ್ಯ ಡಾ. ಬಿ.ಎಸ್.ಖೇಣೆದ್, ಆಡಳಿತಾಧಿಕಾರಿ ಪಿ.ಅಮರೇಶಯ್ಯ, ಡೀನ್ಸ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಯಡವಳ್ಳಿಯವರಿಗೆ ಶುಭ  ಕೋರಿದ್ದಾರೆ.