
ಗಬ್ಬೂರು,ಏ.೦೮- ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಮಾರುತಿ ಕುಮಾರ ನಾಯಕ ಮಲದಕಲ್‌ರವರ ಮಗಳಾದ ನಿಹಾರಿಕಾಳ ದ್ವಿತೀಯ ವರ್ಷದ ಹುಟ್ಟುಹಬ್ಬದ ನಿಮಿತ್ತ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಮಲದಕಲ್ ಶ್ರೀ ನಿಜಾನಂದ ಯೋಗಾಶ್ರಮದ ಪೂಜ್ಯರಾದ ಶ್ರೀ ಗುರುಬಸವ ರಾಜ ಗುರುಗಳು, ಕಳೆದ ಐದು ವರ್ಷಗಳಿಂದ ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ಸಾಮಾಜಿಕ ಚಟುವಟಿಕೆಗಳನ್ನ ಹಮ್ಮಿಕೊಂಡು ದೇವದುರ್ಗ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣದ ಮಹತ್ವವನ್ನ ಸಾರುತ್ತಿರುವ ಮಾರುತಿ ಕುಮಾರ್ ಅವರ ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಜೀವನದ ಸಾರ್ಥಕತೆ ಆಗುತ್ತದೆ ಎಂದು ತಿಳಿಸಿದರು.
ಪ್ರೌಢಶಾಲೆಯ ಮುಖ್ಯ ಗುರುಗಳಾದ ಯಲ್ಲಪ್ಪ ಹಂದ್ರಾಳ ಮಾತನಾಡಿ, ನಮ್ಮ ಶಾಲೆಯ ಬಹುದಿನದ ಬೇಡಿಕೆಯಾದ ಶುದ್ಧ ನೀರಿನ ಘಟಕದ ವ್ಯವಸ್ಥೆಯನ್ನು ಕಲ್ಪಿಸಿರುವ ಮಾರುತಿ ಕುಮಾರ ಮಲದಕಲ್ ರವರು ಶೈಕ್ಷಣಿಕ ಕಾಳಜಿ ಮೆಚ್ಚತಕ್ಕದ್ದು ಮತ್ತು ನೀರು ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಕುಡಿಯುವ ನೀರನ್ನು ವ್ಯರ್ಥ ಮಾಡದೆ ಬಳಸಬೇಕೆಂದರು.
ಈ ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಶಂಭುಲಿಂಗರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ ಮಾರುತಿ ಕುಮಾರ ಮಲದಕಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವಿಂದಪಲ್ಲಿ ಮುಖ್ಯೋಪಾಧ್ಯಾಯರಾದ ಷಣ್ಮುಖ ಹೂಗಾರ, ಗೂಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಶರಣ ಪಾಟೀಲ್ ಹೆರೂರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಾಮಣ್ಣ ನಾಯಕ, ಕುಮಾರ್ ನಾಯಕ್ ಭೋಗಿ, ಬಸವರಾಜ್ ಮಸರಕಲ್, ಹಂಪನಗೌಡ ಪಾಟೀಲ್, ಬಸವರಾಜ ಆಕಳ್, ಮಲದಕಲ್ ಗ್ರಾಮದ ಮುಖಂಡರಾದ
ಎಚ್.ಎಲ್. ಉಮಣ್ಣ ನಾಯಕ, ಅಂಬಣ್ಣ ಹಾಲುಮತ, ಹೆಚ್.ಎಲ್. ಆಂಜನೇಯ ನಾಯಕ್, ಅಮರೀಶ್ ನಾಯಕ್, ವೈ. ನಾಗಲಿಂಗ ನಾಯಕ, ಬಾಲಯ್ಯ ನಾಯಕ್ ಸೇರಿದಂತೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.