ಕಲಬುರಗಿ:ಜೂ.26: ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮಾನಯ್ಯ ಬಡಿಗೇರ ಅವರಿಗೆ ಎಚ್.ಕೆ. ಸೀತನೂರ ಆರ್ಟ ಗ್ಯಾಲರಿಯಿಂದ ಅಭಿನಂದನಾ ಸಮಾರಂಭ ರವಿವಾರ ಜರುಗಿತು.
ಬ್ರಹ್ಮಪೂರ ಏಕದಂಡಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇಶದ ಶ್ರೇಷ್ಠ ಶಿಲ್ಪಿ ಡಾ. ಮಾನಯ್ಯ ಬಡಿಗೇರ ಅವರು ಸಾವಿರಾರು ಮೂರ್ತಿಗಳನ್ನು ತಯ್ಯಾರಿಸಿದ್ದಾರೆ. ಅವು ದೇಶ ವಿದೇಶಗಳಲ್ಲಿ ಪೂಜೆಗೊಳ್ಳುತ್ತಿವೆ. ಅವರ ಸಾಧನೆ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ. ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಡಾ. ಮಾನಯ್ಯ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಸಾಧಕರಿಗೆ ಸನ್ಮಾನ ಡಾ ಶ್ರೀನಿವಾಸ ಸಿರನೂಕರ್, ಡಾ. ಸ್ವಾಮಿರಾವ ಕುಲಕರ್ಣಿ, ಪ್ರಭಾಕರ ಜೋಶಿ,ಸೀತಾ ಮಲ್ಲಾಬಾದಿ, ಭವಾನಿಸಿಂಗ ಠಾಕೂರ, ಶಿವಶರಣ ಬೆಣ್ಣೂರ ಅವರಿಗೆ ಸನ್ಮಾನಿಸಿ ಗೌರವ ಕಾಣಿಕೆ ನೀಡಿದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಜಂಟಿ ನಿದೇರ್ಶಕ ಕೆ.ಎಚ್. ಚನ್ನೂರ, ಡಾ.ರಾಜೇಂದ್ರ ಯರನಾಳೆ, ಶಂಕ್ರಯ್ಯ ಘಂಟಿ, ವಿಜಯ ಹಾಹರಗುಂಡಗಿ, ಡಾ ಸದಾನಂದ ಪೆರ್ಲಾ, ನರಸಿಂಗರಾವ ಹೇಮನೂರ, ಎಂ ಸಂಜೀವ, ಬಾಬುರಾವ ಹೆಚ್, ಕಿರಣ ಪಾಟೀಲ್, ರಮೇಶ ಜೋಶಿ, ಲಕ್ಷ್ಮೀಕಾಂತ ಮನೋಕರ್, ಪ್ರಭು ಜುಮ್ಮಣ್ಣಾ, ಬಡಿಗೇರ ಪರಿವಾರದವರು, ಸೀತನೂರ ಪರಿವಾರದವರು ಉಪಸ್ಥಿತರಿದ್ದರು.
ಮೋಹನ ಸೀತನೂರ ಸ್ವಾಗತಿಸಿದರು. ಸಹನಾ ಸೀತನೂರ ಪ್ರಾರ್ಥಿಸಿದರು. ಡಾ ಅಶೋಕ ಶಟಕಾರ ಕಾರ್ಯಕ್ರಮ ನಿರೂಪಿಸಿದರು.