
ಕಲಬುರಗಿ.ಮಾ.17: ನಗರದ ಮಹಾಂತನಗರದ ಬಸವ ಮಂಟಪದಲ್ಲಿ ಮಾರ್ಚ್ 19ರಂದು ಭಾನುವಾರ ಬೆಳಿಗ್ಗೆ 10-30ಕ್ಕೆ ಅನಘ್ರ್ಯರತ್ನ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರ 77ನೇ ಜಯಂತಿ ಹಾಗೂ 4ನೇ ಲಿಂಗೈಕ್ಯ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವದಳದ ನಾಗರಾಜ್ ಎನ್., ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಮಾಡುವರು. ದಿವ್ಯ ಸಾನಿಧ್ಯವನ್ನು ಬಸವಪ್ರಭು ಸ್ವಾಮೀಜಿ, ಅಧ್ಯಕ್ಷತೆಯನ್ನು ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎಸ್. ದಿವಾಕರ್ ಅವರು ವಹಿಸುವರು. ಮಾಜಿ ಶಾಸಕಿ ಶ್ರೀಮತಿ ಅರುಣಾದೇವಿ ಚಂದ್ರಶೇಖರ್ ಪಾಟೀಲ್ ರೇವೂರ್ ಅವರು ಧ್ವಜಾರೋಹಣ ನೆರವೇರಿಸುವರು. ಸುರೇಖಾ ನಿಂಬೆಣ್ಣಪ್ಪ ಕೋರವಾರ್, ದೀಪಾಲಿ ಆರ್. ಬಿರಾದಾರ್, ಜ್ಯೋತಿ ಕಟಾಳೆ, ಸುಧಾ ಚಂದ್ರಶೇಖರ್ ಮಲ್ಲಾಬಾದ್ ಅವರು ಧರ್ಮಗುರು ಬಸವಣ್ಣನವರ ಪೂಜೆ ನೆರವೇರಿಸುವರು ಎಂದರು.
ಬಸವತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟ್, ಯುವ ಸಾಹಿತಿ ಮಹಾಂತೇಶ್ ಕುಂಬಾರ್ ಅವರು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಸಂಗಮನಾಥ್ ರಬಶೆಟ್ಟಿ, ಪ್ರಕಾಶ್ ಜಮಾದಾರ್, ಕವಿತಾ ಡಾ. ಶಿವನಾಗಪ್ಪ ಪಾಟೀಲ್ ಅವರು ಆಗಮಿಸುವರು. ವಿಜಯಲಕ್ಷ್ಮೀ ಎಸ್. ಕೆಂಗನಾಳ್ ಅವರು ಸಂಗೀತ ಸೇವೆ ಸಲ್ಲಿಸುವರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾನಂದ್ ಪಿಸ್ತಿ, ರಾಜಕುಮಾರ್ ಕೋಟಿ, ರೇವಣಸಪ್ಪ ಹೆಗಣೆ, ಸಿದ್ರಾಮಪ್ಪ ಲದ್ದೆ, ವಿಜಯಕುಮಾರ್ ಮೇಳಕುಂದಿ, ಬಸವರಾಜ್ ಮಹಾಂತಗೋಳ್, ಶಾಂತಪ್ಪ ಪಾಟೀಲ್, ಮಲ್ಲಣ್ಣ ಉದಗೀರ್, ಪ್ರದೀಪ್ ದಾಬಶೆಟ್ಟಿ, ಬಿ.ಎಂ. ಏರಿ, ಶಿವಲಿಂಗಪ್ಪ ಗೌಳಿ, ಸಿದ್ಧರಾಮಪ್ಪ ಲಕಮಣ, ಸೋಮಶೇಖರ್ ಮಹಾಗಾಂವ್, ಪರ್ವತಯ್ಯ ಬೀದರಕರ್, ಸಿದ್ರಾಮಪ್ಪ ಸಜ್ಜನ್, ಕಲ್ಯಾಣಕುಮಾರ್, ವೀರಣ್ಣ ಲೊಡ್ಡಣ್, ಶರಣು ಕಾಂತಾ, ಸಂಗಣ್ಣ ಚಟ್ಟಿ, ರಾಜೇಂದ್ರ ಮದಗುಣಕಿ, ದತ್ತು ದೇವಣಿ, ಲಲಿತಾಬಾಯಿ ಜೀವಣಗಿ, ಮಲ್ಲಮ್ಮ ಬಾಪಗೌಡ ಪಾಟೀಲ್, ಶಾಂತಾ ನಾಗೇಶ್ ವಾಲಿ, ಮಲ್ಲಿಕಾರ್ಜುನ್ ಅಮಾತೆಪ್ಪಗೋಳ್, ಪ್ರಶಾಂತ್ ಕಟಾಳೆ ಮುಂತಾದವರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕ ಮಹಿಳಾ ಗಣ ಬಸವಮಂಟಪದ ಸೋಮಶೇಖರ್, ಸಂತೋಷ್, ಜಗದೇವಿ ಚಟ್ಟಿ ಮುಂತಾದವರು ಉಪಸ್ಥಿತರಿದ್ದರು.