ಡಾ.ಮಾಜಿದ್ ದಗಿಗೆ ಅಬ್ದುಲ್ ರಹೀಂ ಖಾನ್ ಸಾಹಿತ್ಯ ಪ್ರಶಸ್ತಿ

ಕಲಬುರಗಿ:ನ.14:ಹೈದರಾಬಾದ್ ನ ಹಿಮಾಯತ್ ನಗರದ ಉರ್ದು ಸಭಾಂಗಣದಲ್ಲಿ ರೆಖ್ತನಾಮ ಉರ್ದು ತ್ರೈಮಾಸಿಕ ಮತ್ತು ಅಂಜುಮನ್-ಎ ತಾರಖಿ ಉರ್ದು ಹಿಂದ್ ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈದರಾಬಾದ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಮಾಜಿದ್ ದಗಿ ಗುಲ್ಬರ್ಗ ಅವರಿಗೆ ‘ಅಬ್ದುಲ್ ರಹೀಂ ಖಾನ್ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉರ್ದು ಉಸ್ಮಾನಿಯಾ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಪೆÇ್ರ.ಎಸ್.ಎ.ಶಕೂರ್, ಪೆÇ್ರ.ಸೈಯದ್ ಮೊಯಿನ್ ಅಹ್ಸಾನ್, ಮಹಿಳಾ ಅಧ್ಯಯನ ವಿಭಾಗದ ಅಧ್ಯಕ್ಷೆ ಪೆÇ್ರ.ಅಮೀನಾ ತೆಹ್ಸೀನ್, ಅಂಜುಮನ್-ಎ-ತಾರಖಿ ಉರ್ದು ಹೈದರಾಬಾದ್ ಕಾರ್ಯದರ್ಶಿ ಶಾಹಿದ್ ಹುಸೇನ್ ಜುಬೈರಿ, ರಾಜ್ಯಶಾಸ್ತ್ರದ ಮಾಜಿ ಸಹಾಯಕ ಪ್ರಾಧ್ಯಾಪಕ ಡಾ.ಸೈಯದ್ ಇಸ್ಲಾಮುದ್ದೀನ್ ಮುಜಾಹಿದ್, ಪ್ರಧಾನ ಸಂಪಾದಕ ಮುಹಮ್ಮದ್ ತಾಕಿ ಇದ್ದರು.