ಡಾ. ಮಲ್ಹಾರಾವ್ ಮಲ್ಲೆ ಆಸ್ಪತೆಯಲ್ಲಿ ಬೂಸ್ಟರ್ ಡೋಸ್ ಲಸಿಕೆ

ಕಲಬುರಗಿ.ಜೂ.23:ಕೋವಿಡ್-19 ಮುನ್ನೆಚ್ಚರಿಕಾ ಲಸಿಕೆ (ಬೂಸ್ಟರ್ ಡೋಸ್) ಕೋವಿಶೀಲ್ಡ ಮತ್ತು ಕೋವ್ಯಾಕ್ಸಿನ ಲಸಿಕೆಯನ್ನು 18 ರಿಂದ 59 ವರ್ಷದ ಫಲಾನುಭವಿಗಳು ಖಾಸಗಿಯಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಕಲಬುರಗಿ ಜಗತ್ ಸರ್ಕಲ್ ಬಳಿಯಿರುವ ಡಾ. ಮಲ್ಹಾರಾವ್ ಮಲ್ಲೆ ಆಸ್ಪತೆಯಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ಕಲಬುರಗಿ ಆರ್.ಸಿ.ಹೆಚ್ ಅಧಿಕಾರಿಗಳು ತಿಳಿಸಿದ್ದಾರೆ.

  ಕಲಬುರಗಿಯ ಈ ಆಸ್ಪತೆಯಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಾಯಂಕಾಲ 4 ಗಂಟೆಯವರೆಗೆ ಮುನ್ನೆಚ್ಚರಿಕಾ ಲಸಿಕೆ ಹಾಕಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳು ತಿಳಿಸಿದ್ದಾರೆ.