ಡಾ. ಮಲ್ಲಿಕಾರ್ಜುನ ಮನಸೂರ ಅವರ ಪುಣ್ಯಸ್ಮರಣೆ

ಧಾರವಾಡ, ಸೆ 12: ಡಾ.ಮಲ್ಲಿಕಾರ್ಜುನ ಮನಸೂರ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಡಾ.ಮನಸೂರ ರಾಷ್ಟ್ರಿಯ ಟ್ರಸ್ಟ್‍ದಿಂದ ಮನಸೂರ ಅವರ ಮನೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಅವರು ಡಾ.ಮಲ್ಲಿಕಾರ್ಜುನ ಮನಸೂರ ಅವರ ಸಮಾದಿಗೆ ಪೂಜೆಯೊಂದಿಗೆ ಪುಷ್ಪನಮನ ಸಲ್ಲಿಸಿದರು.

ನಂತರ ಅವರು ಮಾತನಾಡಿ, ಡಾ. ಮಲ್ಲಿಕಾರ್ಜುನ ಮನಸೂರ ಅವರು ಸಂಗೀತ ದಿಗ್ಗಜರು. ಕನ್ನಡ ನಾಡಿನ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿರಾಯುಗೊಳಿಸಿದ್ದಾರೆ. ಅವರ ಅಪಾರ ಸಂಖ್ಯೆಯ ಶಿಷ್ಯ ಬಳಗ ಮನಸೂರ ಅವರ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಮುಂದುವರಿಸಿದ್ದಾರೆ. ಟ್ರಸ್ಟ್ ಸಂಗೀತ ಶಾಲೆಯ ಮಕ್ಕಳು ಮನಸೂರ ಅವರ ಸಂಗೀತ ಪರಂಪರೆಯನ್ನು ಬೆಳೆಸಬೇಕು ಎಂದರು.

ನಂತರ ಅವರು ಡಾ.ಮಲ್ಲಿಕಾರ್ಜುನ ಮನಸೂರ ಅವರ ಕುರಿತ ವಸ್ತುಸಂಗ್ರಹಾಲಯ ವೀಕ್ಷಿಸಿದರು. ಮತ್ತು ಮನಸೂರ ಸಂಗೀತ ತರಗತಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪದ್ಮಶ್ರೀ ಪುರಸ್ಕøತ ಪಂಡಿತ ಎಂ ವೇಂಕಟೇಶಕುಮಾರ, ಟ್ರಸ್ಟ್ ಸದಸ್ಯರಾದ ಡಾ.ದಿಲೀಪ್ ದೇಶಪಾಂಡೆ, ಶಂಕರ ಕುಂಬಿ, ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶಟ್ಟರ ಮತ್ತಿತರರು ಭಾಗವಹಿಸಿದ್ದರು.