ಡಾ. ಮಲ್ಲಿಕಾರ್ಜುನ ಖರ್ಗೆ 80 ನೇ ವರ್ಷದ ಹುಟ್ಟುಹಬ್ಬ- ಕಲಬುರಗಿ ದಕ್ಷಿಣ ಎಲ್ಲಾ ವಾರ್ಡ್‍ಗಳಲ್ಲಿ ಅನ್ನ ಸಂತರ್ಪಣೆ

ಕಲಬುರಗಿ,ಜು.20:ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆಜೀಯವರ 80ನೇ ಜನ್ಮದಿನದ ಅಂಗವಾಗಿ ಜುಲೈ 21 ರ ಗುರುವಾರ ಕಲಬುರಗಿ ದಕ್ಷಿಣ ಅಸೆಂಬ್ಲಿ ಕ್ಷೇತ್ರದಡಿಯಲ್ಲಿ ಬರುವ ಎಲ್ಲಾ ಪಾಲಿಕೆ ವಾರ್ಡ್‍ಗಳಲ್ಲಿರುವ ಕಾಂಗ್ರೆಸ್ ಪಕ್ಷದ ವಿಜೇತ/ ಪರಾಜಿತ ಮಹಾನಗರ ಪಾಲಿಕೆ ಸದಸ್ಯರು, ಆಯಾ ವಾರ್ಡ್‍ಗಳಲ್ಲಿನ ಕಾಂಗ್ರೆಸ್ ಪಕ್ಷದ ಮುಂಡರು ಸೇರಿದಂತೆ ಎಲ್ಲರು ತಮ್ಮ ತಮ್ಮ ವಾರ್ಡ್‍ಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಹಿರಿಯ ನಾಯಕರ ಜನ್ಮೋತ್ಸವ ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ ಎಂದು ಮಾಜಿ ಎಂಎಲ್‍ಸಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಅಲ್ಲಂಪ್ರಭು ಪಾಟೀಲ್ ತಿಳಿಸಿದ್ದಾರೆ.

ಬುದ್ಧನ ತತ್ವಗಳು, ಂಬೇಡ್ಕರ್ ಚಿಂತನೆಗಳು, ಬಸವಣ್ಣನವರ ಸಮಾನತೆಯ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು ನಿರಂತರ ಜನಪರ ಸೇವಕರಾಗಿ ಹೊರಹೊಮ್ಮುವ ಮೂಲಕ ಕಲಬುರಗಿಯ ಭಾಗದ ಜನಪ್ರೀಯ ನಾಯಕರಾಗಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸೇವೆ ಈ ದೇಶಕ್ಕೆ, ರಾಜ್ಯಕ್ಕೆ, ಕಲಬುರಗಿ ಭಾಗಕ್ಕೆ ದೊರಕಲಿ, ಡಾ. ಖರ್ಗೆಜಿ ಅವರಿಗೆ ದೇವರು ಶತಾಯುಷ್ಯ ಕರುಣಿಸಲಿ ಎಂದು ಅಲ್ಲಂಪ್ರಭು ಪಾಟೀಲರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಜು. 21 ರ ಗುರುವಾರ ಕಲಬುರಗಿ ದಕ್ಷಿಣ ಮತಕ್ಷೇತ್ರಲ್ಲಿ ನಡೆಯುವ ಅನ್ನ ಸಂತರ್ಪಣೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿರುವ ಲಿಂಗರಾಜ ಕಣ್ಣಿ, ಲಂಗರಾಜ ತಾರಫೈಲ್ ಹಾಗೂ ಅನೇಕರು ಪಾಲ್ಗೊಳ್ಳುತ್ತಿದ್ದಾರೆಂದು ಅಲ್ಲಂಪ್ರಭು ಪಾಟೀಲ್ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.