ಡಾ. ಮಲ್ಲಿಕಾರ್ಜುನ ಖರ್ಗೆ ರವರ 81ನೇ ಹುಟ್ಟು ಹಬ್ಬ ಮತ್ತು ಪ್ರತಿಭಾ ಪುರಸ್ಕಾರ

ಬೀದರ:ಜು.22: ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜು, ಬೀದರದ ಸಂಸ್ಥಾಪಕರಾದ ಡಾ|| ಮಲ್ಲಿಕಾರ್ಜುನ ಖರ್ಗೆಜೀ ರವರ ಹುಟ್ಟು ಹಬ್ಬ ಮತ್ತು ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿರುವ ಡಾ|| ಶ್ರೀ ಗಾಂಧೀಜಿ ಸಿ. ಮೊಳಕೇರೆ ಪ್ರಾಧ್ಯಾಪಕರು, ಡಾ|| ಬಿ.ಆರ್. ಅಂಬೇಡ್ಕರ ಪದವಿ ಮಹಾವಿದ್ಯಾಲಯ ಕಲಬುರಗಿ ಇವರು ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಡಾ|| ಶ್ರೀ ಮನ್ಮಥ ಡೋಳೆ, ಪ್ರಾಚಾರ್ಯರು, ಮತ್ತು ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಪ್ರಾಂಶುಪಾಲರ ಸಂಘ ಬೀದರ, ಅತಿಥಿಗಳಾದ ಶ್ರೀ ಗೋಪಾಲ ಬಡಿಗೇರ, ಪ್ರಾಚಾರ್ಯರು ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಬೀದರ ಹಾಗೂ ಈ ಸಮಾರಂಭದ ಅಧ್ಯಕ್ಷತೆ ಸ್ಥಾನವನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಪ್ರಭು ರವರು ವಹಿಸಿದರೇ, ಶ್ರೀ ಏಕನಾಥ ಸುಣಗಾರ ರಾಜ್ಯಶಾಸ್ತ್ರ ಉಪನ್ಯಾಸಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಜ್ಯೋತಿ ಬೆಳಗಿಸುವುದರೊಂದಿಗೆ ಸಮಾರಂಭವನ್ನು ಪ್ರಾರಂಭಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಅತಿ ಹೆಚ್ವು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ನಮ್ಮ ಕಾಲೇಜಿನಿಂದ ಪ್ರತಿಭಾವಂತ ವಿದ್ಯಾರ್ಥಿಗಳಾದ ದಾಕ್ಷಿಣಿ ತಂದೆ ಬಸಪ್ಪಾ, ಆಕಾಶ ತಂದೆ ಬಸವರಾಜ, ಓಂಕಾರ ತಂದೆ ನಾಗಪ್ಪಾ, ಮಹೇಶ್ವರಿ ತಂದೆ ವೈಜಿನಾಥ, ಭುವನೇಶ್ವರಿ ತಂದೆ ನರಸಪ್ಪಾ, ಮಲ್ಲಿಕಾರ್ಜುನ ತಂದೆ ಕಲ್ಲಪ್ಪಾ, ಪವನ ತಂದೆ ಸಿದ್ರಾಮ, ವೈಶಾಲಿ ತಂದೆ ರಾಧಾಕಿಶನ, ಅಶ್ವಿನಿ ತಂದೆ ವಿಶ್ವನಾಥ, ಭಾಗ್ಯಶ್ರೀ ತಂದೆ ಮಲಗೊಂಡ, ಶ್ರೀನಿವಾಸರೆಡ್ಡಿ ತಂದೆ ಸಂಜುರೆಡ್ಡಿ, ಆಕಾಶ ತಂದೆ ತುಕಾರಾಮ, ತಿರುಪತಿ ತಂದೆ ಹಸಗೊಂಡ, ಸುನೀಲ ತಂದೆ ಪ್ರಲ್ಹಾದ, ಜಗದೇವಿ ತಂದೆ ಭುಮರೆಡ್ಡಿ, ನಿಕಿತಾ ತಂದೆ ಸಂಗಪ್ಪಾ, ರಾಮಸಿಂಗ ತಂದೆ ದೇವಿದಾಸ, ಸುನೀಲ ತಂದೆ ತುಕಾರಾಮ, ಮಹಾದೇವ ತಂದೆ ಸಂಗಯ್ಯಾ, ಅಮೀತ ತಂದೆ ಚನ್ನಬಸಯ್ಯಾ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಅಂಬಿಕಾ ತಂದೆ ಬಸವರಾಜ ಇವರೆಲ್ಲರಿಗೂ ಸನ್ಮಾನಿಸಲಾಯಿತು.

ಅದೇ ರೀತಿಯಾಗಿ ನಮ್ಮ ಕಾಲೇಜಿನ ಹಾಗೂ ಪ್ರೌಢ ಶಾಲೆಯ 2022-23ನೇ ಶೈಕ್ಷಣಿಕ ವರ್ಷಕ್ಕೆ ಉನ್ನತ ಮಟ್ಟದಲ್ಲಿ ಫಲಿತಾಂಶ ಬರಲು ಕಾರಣರಾದ ಉಪನ್ಯಾಸಕ ಹಾಗೂ ಸಹ ಶಿಕ್ಷಕರಾದ

ಶ್ರೀ ಏಕನಾಥ ತಂದೆ ಸುಣಗಾರ ರಾಜ್ಯಶಾಸ್ತ್ರ ಉಪನ್ಯಾಸಕರು, ಶ್ರೀಮತಿ ಮಮತಾ ಎಂ.ಎಸ್. ಸಹಶಿಕ್ಷಕರು, ಶ್ರೀ ವಿಜಯಕುಮಾರ, ಕನ್ನಡ ಸಹ ಶಿಕ್ಷಕರು 2022-23 ನೇ ಸಾಲಿನಲ್ಲಿ ತಮ್ಮ ವಿಷಯದಲ್ಲಿ 100 ಪ್ರತಿಶತ ಫಲಿತಾಂಶ ನೀಡಿದ್ದರಿಂದಾಗಿ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಉದ್ಘಾಟಕರಾಗಿ ಆಗಮಿಸಿದ ಗಾಂಧಿಜಿಯವರು ರವರು ಮಾತನಾಡಿ ಡಾ|| ಮಲ್ಲಿಕಾರ್ಜೂನ ಖರ್ಗೆಜಿ ರವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಮನ್ಮಥ ಡೋಳೆ ಪ್ರಾಚಾರ್ಯರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಪ್ರಾಂಶುಪಾಲರ ಸಂಘ ಬೀದರ ಇವರು ಮಾತನಾಡಿ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಮತ್ತು ತನ್ನ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು. ಮುಂದೆ ಇದೇ ತರಹ ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸಾಗಬೇಕೆಂದು ಹೇಳಿದರು. ಅಧ್ಯಕ್ಷ ಸ್ಥಾನವಹಿಸಿಕೊಂಡಿರುವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್. ಪ್ರಭು ಅವರು ಮಾತನಾಡಿ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳಾಗಬೇಕಾದರೇ, ಕೆಲವು ಮಹಾನ ವ್ಯಕ್ತಿಗಳನ್ನು ತನ್ನ ಆದರ್ಶವನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ : ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ, ಡಾ|| ಮಲ್ಲಿಕಾರ್ಜುನ ಖರ್ಗೆಜಿರವರು ಮತ್ತು ನರೇಂದ್ರ ಮೋದಿಯವರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಡವಳಿಸಿಕೊಂಡು ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಬೇಕೆಂದು ತಿಳಿಸಿದರು.

ಅದೇ ರೀತಿ ವೇದಿಕೆ ಮೇಲೆ ಆಸನರಾಗಿರುವವರಿಗೆ ಶ್ರೀ ನಸಿರೋದ್ದಿನ್ ಹಿಂದಿ ಉಪನ್ಯಾಸಕರು ಇವರು ಸ್ವಾಗತಿಸಿದರೇ, ಬುದ್ದವಂದನೆಯನ್ನು ಕುಮಾರಿ ಅಕ್ಷತಾ ಸಂಗಡಿಗರು, ಸ್ವಾಗತಗೀತೆಯನ್ನು ಅರ್ಚನಾ ಸಂಗಡಿಗರಿಂದ, ಅದೇ ರೀತಿ ಶ್ರೀ ಶಿವಕುಮಾರ ಸಮಾಜಶಾಸ್ತ್ರ ಉಪನ್ಯಾಸಕರು ವಂದನಾರ್ಪಣೆಯನ್ನು ಹೇಳಿದರು. ಕಾರ್ಯಕ್ರಮವನ್ನು ಶ್ರೀ ವಿಜಯಕುಮಾರ ಸಹಶಿಕ್ಷಕರು ಮತ್ತು ಶ್ರೀಮತಿ ಸುಲೋಚನಾ ಬಿರಾದಾರ ಇವರು ನಿರೂಪಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಪ್ರೌಢ, ಪದವಿ ಪೂರ್ವ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.