
ಕೋಲಾರ,ಆ,೨೯-ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ-ವೀಣಾ ದಂಪತಿಯ ಪುತ್ರ ಡಾ.ಮನೋಹರಗೌಡ ಟಮಕದ ದೇವರಾಜ ಅರಸು ವೈದ್ಯಕೀಯ ವಿಶ್ವವಿದ್ಯಾಲಯದಿಂದ ಜನರಲ್ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಕಳೆದ ವಾರ ನಡೆದ ವಿ.ವಿಯ ೧೩ನೇ ಘಟಿಕೋತ್ಸವದಲ್ಲಿ ಟ್ರಸ್ಟ್‌ನ ನಿರ್ದೇಶಕರಾದ ಜೆ. ರಾಜೇಂದ್ರ ಅವರು ಪದವಿ ಪ್ರದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಪ್ರಭಾಕರ್ ಉಪಸ್ಥಿತರಿದ್ದರು.
ಗ್ರಾಮೀಣ ಜನರ ವೈದ್ಯಕೀಯ ಸೇವೆಗಾಗಿ ತಮಗೆ ದೊರೆತಿರುವ ಎಂ.ಡಿ ಪದವಿಯನ್ನು ಮುಡುಪಾಗಿ ಇರಿಸುವೆ. ಬಡವರಿಗೆ ಉತ್ತಮ ಆರೋಗ್ಯ ಭಾಗ್ಯಕ್ಕಾಗಿ ಸದಾ ಸೇವೆ ಸಲ್ಲಿಸುವೆ ಎಂದು ಮನೋಹರಗೌಡ ತಿಳಿಸಿದರು.
ಡಾ.ಮನೋಹರಗೌಡರನ್ನು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿ.ಎ.ಶಶಿಧರ್, ಕೋಲಾರದ ಪಿ.ಎಸ್.ಸತ್ಯನಾರಾಯಣರಾವ್, ತಿಮ್ಮಾಪುರದ ಗುರುಪ್ರಸಾದ್ ಅಭಿನಂದಿಸಿದ್ದಾರೆ.